ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭೂಕಂಪನ ಅನುಭವ.

Promotion

ದಕ್ಷಿಣ ಕನ್ನಡ,ಜೂನ್,25,2022(www.justkannada.in): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಹಲವು ಕಡೆಗಳಲ್ಲಿ ಭೂಕಂಪನದ ಅನುಭವವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ, ಪೆರಾಜೆ ಎಂಬಲ್ಲಿ ಇಂದು ಬೆಳಗ್ಗೆ 9.12 ರ ವೇಳೆಗೆ ಭೂಕಂಪನದ ಅನುಭವವಾಗಿದ್ದು, ಸುಮಾರು 3-4 ಸೆಕೆಂಡುಗಳ ಕಾಲ ಶಬ್ದದೊಂದಿಗೆ ಲಘು ಕಂಪನ ಆಗಿದೆ  ಎಂದು ಹೇಳಲಾಗುತ್ತಿದೆ.

ಹಾಗೆಯೇ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ  ಚೆಂಬು, ಕರಿಕೆ, ಸಂಪಾಜೆಯಲ್ಲಿ ಸುಮಾರು 3 ರಿಂದ 4 ಸೆಕೆಂಡ್ ಕಾಲ ಭೂಕಂಪನ ಅನುಭವವಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ.

Key words: Earthquake -Dakshina Kannada- District.