‘ಅದ್ಭುತ ದೃಶ್ಯ ವೈಭವದಲ್ಲಿ ಅವನೇ ಶ್ರೀಮನ್ನಾರಾಯಣನ ದರ್ಬಾರ್’

ಬೆಂಗಳೂರು,ಡಿ,27,2019(www.justkannada.in): ಅಮರಾವತಿ ಎಂಬ ಕಾಲ್ಪನಿಕ ನಗರದಲ್ಲಿ ನಡೆಯೋ ಕಾಲ್ಪನಿಕ ಕಥೆಯಲ್ಲಿ ಅದ್ಬುತ ಗ್ರಾಫಿಕ್ಸ್ ಮೂಲಕ ‘ಅವನೇ ಶ್ರೀಮನ್ನಾರಾಯಣ’ ದರ್ಶನ ನೀಡಿದ್ದಾನೆ. ಪೊಲೀಸ್ ಅಧಿಕಾರಿಯಾಗಿದ್ದ ನಾರಾಯಣ್ ಶ್ರೀಮನ್ನಾರಾಯಣನಾಗಿ ಹಾಗೇ ಜರ್ನಲಿಸ್ಟ್ ಆಗಿದ್ದ ಶ್ರೀ ಲಕ್ಷ್ಮಿಯಾಗಿ ಪರಿವರ್ತನೆ ಹೊಂದುವುದು ಹೇಗೆ ಅನ್ನೋದು ಚಿತ್ರದ ವೈಶಿಷ್ಟ್ಯವಾಗಿದೆ.

ಚಿತ್ರ ವಿಭಿನ್ನ ಕಥೆ ಹೊಂದಿದ್ದು,ನಾಟಕ ಕಂಪನಿಯವರಿಂದ ಲೂಟಿಯಾದ ನಿಧಿಯನ್ನು ಪಡೆಯಲು ಅಭೀರ ವಂಶದ  ಇಬ್ಬರು ವಾರಸುದಾರರು ಪ್ರಯತ್ನಪಡುತ್ತಿರುತ್ತಾರೆ. ಆಗ ಅಮರಾವತಿಯ ಬುದ್ದಿವಂತ ಹಾಗೇ  ಕುಚೇಷ್ಟೇ ಪ್ರವೃತ್ತಿ ಹೊಂದಿರೋ ಪೊಲೀಸ್ ಅಧಿಕಾರಿ ನಾರಾಯಣನಾಗಿ ರಕ್ಷಿತ್ ಶೆಟ್ಟಿ, ಲೂಟಿ ಹುಡುಕಿ ಕೊಡೋದಾಗಿ ಎರಡೂ ವಿರೋಧಿ ಗುಂಪುಗಳಿಗೂ ಮಾತು ಕೊಟ್ಟು ನಿಧಿ ಹುಡುಕುವ ಕೆಲಸ ಮಾಡ್ತಿರುತ್ತಾನೆ. ‘ಲಕ್ಷ್ಮೀ’ ಯನ್ನು ಒಲಿಸಿಕೊಂಡು ನಿಧಿಯನ್ನು ಹುಡುಕುವ ಸವಾಲನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು  ಕಥೆಯ ಹೈಲೆಟ್ಸ್..

ಕಿರಿಕ್ ಪಾರ್ಟಿ ಆದಮೇಲೆ 3 ವರ್ಷದ ಬಳಿಕ ರಕ್ಷಿತ್ ಶೆಟ್ಟಿ ತೆರೆಮೇಲೆ  ಡಿಫರೆಂಟ್ ಮ್ಯಾನರಿಸಂ ಮೂಲಕ ಕಾಣಿಸಿಕೊಂಡಿದ್ದು,ತಮಾಷೆಯನ್ನ ಮಾಡುತ್ತಾ ವಿಭಿನ್ನ ಶೈಲಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಪ್ರೇಕ್ಷಕರ ಚಪ್ಪಾಳೆಗಿಟ್ಟಿಸಿಕೊಂಡಿದ್ದಾರೆ.ಜರ್ನಲಿಸ್ಟ್ ಆಗಿ ಸಾನ್ವಿ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ಹಾಗೇ ಜಯರಾಮ ಮತ್ತು ತುಕುರಾಮನಾಗಿ ಬಾಲಾಜಿ ಮನೋಹರ್ ಮತ್ತು ಪ್ರಮೋಧ್ ಶೆಟ್ಟಿ ನಟಿಸಿದ್ರೆ, ಕೌಬಾಯ್ ಕೃಷ್ಣನಾಗಿ ರಿಷಭ್ ಶೆಟ್ಟಿ ಅಭಿನಯಿಸಿದ್ದಾರೆ.

ಮೂಲತಃ ತಂತ್ರಜ್ಞರಾದ ಸಚಿನ್ ಅವರು ಚಿತ್ರಕ್ಕೆ ನಿರ್ದೇಶನ ಮಾಡಿ ಸಂಕಲನವನ್ನು ನಿಭಾಯಿಸಿದ್ದಾರೆ. ಚಿತ್ರದಲ್ಲಿ ಹ್ಯಾಂಡ್ಸಾಫ್ ಸಾಂಗ್ ಮತ್ತು ಅದರಲ್ಲಿನ ಸಿಗ್ನೇಚರ್ ಸ್ಟೇಫ್ ಹೆಚ್ಚು ಮುದ ನೀಡುತ್ತೆ. ಅದ್ವುತ ಗ್ರಾಫಿಕ್ಸ್ ಮತ್ತು ಕ್ಯಾಮರಾವರ್ಕ್ ಚಿತ್ರದ ಪ್ರಮುಖಾಂಶ.

ಚಿತ್ರವು 3 ಗಂಟೆ 5 ನಿಮಿಷದಷ್ಟು ದೀರ್ಘವಾಗಿದ್ದು ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ ಚಿತ್ರವನ್ನು ಇನ್ನಷ್ಟು ಬಿಗಿಗೊಳಿಸಬಹುದಿತ್ತು.ಅಲ್ಲದೇ ಚಿತ್ರದ ಕಥೆಯನ್ನ ಇನ್ನಷ್ಟು ಮೊನಚುಯಾಗಿಸಬಹುದಿತ್ತು.ಚಿತ್ರಕಥೆ ನಿರೂಪಣೆಯಲ್ಲಿ ಹಾಲಿವುಡ್ ಚಿತ್ರದಂತೆ ಕಾಣುವ ಅವನೇ ಶ್ರೀಮನ್ನಾರಾಯಣ ಪ್ರೇಕ್ಷಕರಿಗೆ ರಸದೌತಣ ನೀಡುದರಲ್ಲಿ ಸಂಶಯವಿಲ್ಲ.

ಕೃಪೆ..

-ರೂಪೇಶ್ ಬೈಂದೂರು

Key words: Durbar – avane Srimannarayana – spectacular -glory’.