ಯಾರನ್ನ ಅಭ್ಯರ್ಥಿ ಮಾಡುತ್ತಾರೋ ಅವರಿಗೆ ವೋಟ್ ಹಾಕೋದಷ್ಟೇ ನನ್ನ ಕೆಲಸ – ಮೇಯರ್ ಚುನಾವಣೆಯಲ್ಲೂ ತಟಸ್ಥ ನಿಲುವು ತಳೆದ್ರಾ ಮಾಜಿ ಸಚಿವ ಜಿ,ಟಿ ದೇವೇಗೌಡ…

ಮೈಸೂರು,ಡಿ,27,2019(www.justkannada.in): ಹುಣಸೂರು ಉಪಚುನಾವಣೆಯಲ್ಲಿ ತಟಸ್ಥ ನಿಲುವು ತಳೆದಿದ್ದ ಮಾಜಿ ಸಚಿವ ಜಿ.ಟಿ ದೇವೇಗೌಡ ಇದೀಗ ಮತ್ತೆ ಮೇಯರ್ ಚುನಾವಣೆಯಲ್ಲಿ ತಟಸ್ಥ ನಿಲುವು ತಳೆಯುವ ಸೂಚನೆ ನೀಡಿದ್ದಾರೆ.

ಮೈಸೂರು ಮೇಯರ್ -ಉಪಮೇಯರ್ ಚುನಾವಣೆಗೆ ಮೀಸಲಾತಿ ಪ್ರಕಟವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಜಿ.ಟಿ ದೇವೇಗೌಡ, ಮೈಸೂರಿನಲ್ಲಿ ಸಾರಾ ಮಹೇಶ್ ಅವರು ಏನ್ ಹೇಳ್ತಾರೋ. ಕುಮಾರಸ್ವಾಮಿ ಅವರು ಅದನ್ನೆ ಮಾಡಿಕೊಂಡು ಬರುತ್ತಿದ್ದಾರೆ. ನಾನು ಉಸ್ತುವಾರಿ ಸಚಿವನಾಗಿರಲಿ, ಮತದಾರನಾಗಿರಲಿ. ಅವರು ಯಾವತ್ತು ನನ್ನ ಮೇಯರ್ ಚುನಾವಣೆಯಲ್ಲಿ ಪರಿಗಣಿಸಿಲ್ಲ. ಹಾಗಾಗಿ ಇವಾಗಲೂ ಅವರೇ ಚುನಾವಣೆ ಮಾಡಲಿ ಎಂದು ಹೇಳಿಕೆ ನೀಡಿದ್ದಾರೆ.

ಪಕ್ಷ, ಹೈಕಮಾಂಡ್ ಯಾರನ್ನ ಅಭ್ಯರ್ಥಿ ಮಾಡುತ್ತೋ ಅವರಿಗೆ ವೋಟ್ ಹಾಕೋದಷ್ಟೇ ನನ್ನ ಕೆಲಸ. ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತೇ ಅದೇ ತಾನೇ ತೀರ್ಮಾನ. ಮೇಯರ್ ಚುನಾವಣೆ ನನ್ನ ವ್ಯಾಪ್ತಿಗೂ ಬರುತ್ತೆ.ನಾನು ಕೂಡ ಸದಸ್ಯನಾಗಿದ್ದೇನೆ. ಈಗಾಗಲೇ ಸರ್ಕಾರದಿಂದ ನೋಟಿಫಿಕೇಶನ್ ಆಗಿದೆ ಎಂದು ಜಿ.ಟಿ ದೇವೇಗೌಡರು ತಿಳಿಸಿದರು.

Key words: former minister – GT Deve Gowda- mysore-mayor election.