ಅಣ್ಣವ್ರ ಮನೆ ಮಗನ ಸಿನಿಮಾಗೆ ದುನಿಯಾ ವಿಜಿ ನಿರ್ದೇಶಕ

Promotion

ಬೆಂಗಳೂರು, ಅಕ್ಟೋಬರ್ 27, 2020 (www.justkannada.in): ಲವ್ ಸಬ್ಜೆಕ್ಟ್ ಇರುವ ಸಿನಿಮಾವೊಂದನ್ನು ವಿಜಿ ನಿರ್ದೇಶಿಸಲು ಹೊರಟಿದ್ದಾರೆ.

ಹೌದು. ಸಲಗ ಸಿನಿಮಾ ನಿರ್ದೇಶಿಸಿದ ಖುಷಿಯಲ್ಲಿರುವ ದುನಿಯಾ ವಿಜಯ್ ಈಗ ಮತ್ತೊಂದು ಸಿನಿಮಾ ನಿರ್ದೇಶಿಸಲು ಹೊರಟಿದ್ದಾರೆ.

ಈ ಸಿನಿಮಾಗೆ ನಾಯಕರಾಗಿ ಡಾ. ರಾಜ್ ಮನೆ ಮಗ ಲಕ್ಕಿ ಗೋಪಾಲ್ ಆಯ್ಕೆಯಾಗಿದ್ದಾರೆ ಎಂದು ಸ್ವತಃ ವಿಜಯ್ ತಿಳಿಸಿದ್ದಾರೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ಕೂಡಾ ಸಾಥ್ ಕೊಡಲಿದ್ದಾರಂತೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.