ನನ್ನ ಗೆಲುವಿಗೆ ಜೆಡಿಎಸ್ ವರಿಷ್ಠ ದೇವೇಗೌಡರೇ ವರವಾದರು- ತುಮಕೂರು ಸಂಸದ ಜಿ.ಎಸ್ ಬಸವರಾಜು…

Promotion

ತುಮಕೂರು,ಮೇ,25,2019(www.justkannada.in):  ತುಮಕೂರು ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಸದರಾಗಿರುವ ಬಿಜೆಪಿಯ ಜಿಎಸ್ ಬಸವರಾಜು ತಮ್ಮ ಗೆಲುವಿಗೆ ಹೆಚ್.ಡಿ ದೇವೇಗೌಡರೇ ಕಾರಣ ಎಂಬ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಇಂದು ಮಾತನಾಡಿದ ಜಿ.ಎಸ್ ಬಸವರಾಜು, ನನ್ನ ಗೆಲುವಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವರವಾದರು. ಕಾಂಗ್ರೆಸ್ ನ ಮುದ್ದಹನುಮೇಗೌಡರು ಸ್ಪರ್ಧಿಸಿದ್ದರೇ ನನಗೆ ಗೆಲುವು ಕಷ್ಟವಾಗುತ್ತಿತ್ತು.ಕೆಎನ್ ರಾಜಣ್ಣ ನನಗೆ ಸ್ನೇಹಿತರು. ಆದರೆ ಅವರು ನನಗೆ ಸಹಾಯ ಮಾಡಿದ್ದಾರೆ ಎಂದು ಹೇಳಲು ಆಗಲ್ಲ ಎಂದರು.

ಹಾಗೆಯೇ  ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಎಸ್  ಬಸವರಾಜು,ದೇವೇಗೌಡರ ಕುಟುಂಬ ಯಾವತ್ತಾದರೂ ಸತ್ಯ ಹೇಳಿದ್ದಾರಾ..? ಈಗ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುವ ನಾಟಕ ಆಡುತ್ತಿದ್ದಾರೆ ಎಂದು ಟೀಕಿಸಿದರು.

Key words: Due to HD Deve Gowda for my win- GS Basavaraju

#Tumkur  #GS Basavaraju #HD Deve Gowda