ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು,ಏಪ್ರಿಲ್,13,2021(www.justkannada.in) : ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಎಚ್‌.ಎಸ್‌.ಆರ್‌.ಬಡಾವಣೆ ಪೊಲೀಸರು ಬಂಧಿಸಿದ್ದಾರೆ.Agriculture,Pumpset,Adequate,Electricity,giving,Ask,Protest 

ಕಾಸರಗೋಡಿನ ಮೊಹಮ್ಮದ್ ಮುಸ್ತಾಕ್ (31), ಮೊಹ್ಮದ್ ಆಶೀಕ್ (19), ದಕ್ಷಿಣ ಕನ್ನಡ ಜಿಲ್ಲೆಯ ಸಮೀರ್ (28) ಹಾಗೂ ಮೊಹಮ್ಮದ್ ಅಫ್ರಿದಿ (23) ಬಂಧಿತರು.

ಆರೋಪಿಗಳಿಂದ 5 ಲಕ್ಷ ಮೌಲ್ಯದ 48 ಕೆ.ಜಿ. ಗಾಂಜಾ, 45 ಲಕ್ಷ ಮೌಲ್ಯದ 1.34 ಕೆ.ಜಿ ಹ್ಯಾಷ್‌ ಆಯಿಲ್, ಕೃತ್ಯಕ್ಕೆ ಬಳಸುತ್ತಿದ್ದ ತೂಕದ ಯಂತ್ರ, ಸ್ಲೀಪ‍ರ್ ಕೋಚ್ ಬಸ್, ಬೊಲೆರೋ ವಾಹನ, 4,700 ನಗದು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.drugs-selling-Detention-four-accused

ಆರೋಪಿಗಳು ಹೊರಗಿನಿಂದ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ತಂದು ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಮಾದಕವಸ್ತುಗಳ ನಿಯಂತ್ರಣ ಕಾಯ್ದೆಯಡಿ (ಎನ್‌ಡಿಪಿಎಸ್) ಪ್ರಕರಣ ದಾಖಲಿಸಲಾಗಿದೆ.

key words : drugs-selling-Detention-four-accused