ಡ್ರಗ್ಸ್ ಮಾಫಿಯಾ ವಿಚಾರ: ಎಷ್ಟೇ ದೊಡ್ಡವರಿರಲಿ ವಿಚಾರಣೆ ಮಾಡುವುದು ಶತ ಸಿದ್ಧ- ಗೃಹ ಸಚಿವ ಬಸವರಾಜ ಬೊಮ್ಮಾಯಿ…

Promotion

ಬೆಂಗಳೂರು,ಸೆಪ್ಟಂಬರ್,10,2020(www.justkannada.in):  ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯವರು ಬಹಳ ಪ್ರೊಫೆಷನಲ್ ಆಗಿ, ಕ್ರಮ ಬದ್ಧವಾಗಿ ತನಿಖೆ ಮಾಡ್ತಿದ್ದಾರೆ. ತನಿಖೆ ಜಾಡು ಹಿಡಿದು ಎಷ್ಟೇ ದೊಡ್ಡವರಿರಲಿ ವಿಚಾರಣೆ ಮಾಡುವುದು ಶತಸಿದ್ಧ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.jk-logo-justkannada-logo

ಡ್ರಗ್ಸ್ ದಂಧ ಕುರಿತು ಇಂದು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಮ್ಮ ಕಾರ್ಯಾಚರಣೆ, ವಿಚಾರಣೆ ,ಸ್ಕೃಟಿನಿ ಅಪ್ ದಿ ಕೋರ್ಟ್ ಆಗುತ್ತದೆ. ಕಾನೂನಿನ ಅನ್ವಯ ಕಾರ್ಯಾಚರಣೆ ಮಾಡಲಾಗ್ತಿದೆ. ವ್ಯವಸ್ಥಿತವಾಗಿ ಸಾಕ್ಷಿಗಳ ಆಧಾರಗಳ ಮೇಲೆ ಕ್ರಮ ಬದ್ಧವಾಗಿ ತನಿಖೆ ನಡೆಯುತ್ತಿದೆ. ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಅನುಕೂಲ ಮಾಡಿಕೊಡಿ ಎಂದು ತಜ್ಞರ ಅಭಿಪ್ರಾಯ ಆಗಿದೆ ಎಂದರು.drugs-mafia-inquire-home-minister-basavaraja-bommai

ನಾನು ನಮ್ಮ ಕಾನೂನು  ತಜ್ಞರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಕಾನೂನು ಇನ್ನಷ್ಟು ಬಿಗಿಗೊಳಿಸಲು ಕ್ರಮ  ಕೈಗೊಳ್ಳಲಾಗುತ್ತದೆ. ಕಾನೂನು ಸಚಿವರ ಜೊತೆಗೂ ಚರ್ಚೆ ಮಾಡುತ್ತೇನೆ. ರಾಷ್ಟ್ರೀಯ ಕಾನೂನು ಶಾಲೆ ಮುಖ್ಯಸ್ಥರ ಜೊತೆ ಮಾತಾಡಿದ್ದೇನೆ. ನ್ಯಾಷನಲ್ ಲಾ ಸ್ಕೂಲ್ ಫ್ರೊಫೆಸರ್ ಗಳ ಜೊತೆ ಚರ್ಚೆ ಮಾಡಿ ಕಾನೂನು ಬಿಗಿ ಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. \

Key words: Drugs Mafia – Inquire – Home Minister -Basavaraja Bommai