ಪಕ್ಷೇತರ ಅಭ್ಯರ್ಥಿ ಜೊತೆ ಕಾಣಿಸಿಕೊಂಡ ಡ್ರೋಣ್ ಪ್ರತಾಪ್ ಪಾಲಿಟಿಕ್ಸ್‌ ಗೆ ಬರ್ತಾರಾ..?

Promotion

ಮಂಡ್ಯ,ಫೆಬ್ರವರಿ,10,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಕಾವು ಜೋರಾಗಿದೆ. ಇನ್ನ ಸ್ವಲ್ಪ ದಿನಗಳಲ್ಲಿ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದ್ದು ಈ ಮಧ್ಯೆ ಕಾಂಗ್ರೆಸ್‌, ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಸಿದ್ಧತೆ ಚುರುಕಾಗಿದೆ.  ಈ ಮಧ್ಯೆ ಒಂದು ಕಾಲದಲ್ಲಿ ಟ್ರೋಲ್ ಗೆ ಒಳಗಾಗಿ ಭಾರೀ ಸದ್ದು ಮಾಡಿದ್ದ ಡ್ರೋನ್‌ ಪ್ರತಾಪ್  ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂಬ ಕುತೂಹಲ ಮೂಡಿದೆ.

ಹೌದು,  ಡ್ರೋನ್‌ ಸಂಶೋಧನೆಯ ಮೂಲಕ ಭಾರೀ ಸುದ್ದಿಯಾಗಿ ಬಳಿಕ ಟ್ರೋಲ್‌ಗೆ ಒಳಗಾಗಿದ್ದ ಡ್ರೋಣ್  ಪ್ರತಾಪ್  ಇದೀಗ ಮತ್ತೆ ಸುದ್ಧಿಯಾಗಿದ್ದು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್‌ ಜೊತೆ ಕಾಣಿಸಿಕೊಂಡಿದ್ದಾರೆ.

ಇಂದು ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್ ಹುಟ್ಟುಹಬ್ಬ ಹಿನ್ನೆಲೆ, ದೆಹಲಿಯಿಂದ ಆಗಮಿಸಿದ ಮಾಧವ್ ಕಿರಣ್‌ ಗೆ ಏರ್‌ಪೋರ್ಟ್‌ನಲ್ಲೆ ಕೇಕ್ ಕತ್ತರಿಸಿ ಡ್ರೋಣ್ ಪ್ರತಾಪ್ ಶುಭಾಶಯ ತಿಳಿಸಿದ್ದಾರೆ.

ಒಳ್ಳೆ ಕೆಲಸ ಮಾಡಲು ಹೊರಟಿರುವ ಮಾಧವ್ ಕಿರಣ್ ಜೊತೆ ನಾನು ಇರ್ತಿನಿ ಎಂದು ಡ್ರೋಣ್ ಪ್ರತಾಪ್ ಹೇಳಿದ್ದು ತನ್ನ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮಾಧವ್ ಕಿರಣ್ ಪರ ಪ್ರಚಾರಕ್ಕೆ ಡ್ರೋಣ್ ಪ್ರತಾಪ್ ಆಗಮಿಸಲಿದ್ದಾರಂತೆ.

Key words: Drone Pratap – came – politics-mandya