ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಕಾರು : ಸ್ಥಳೀಯರಿಂದ ಐವರ ರಕ್ಷಣೆ

Promotion

ಚಿಕ್ಕಮಗಳೂರು,ಡಿಸೆಂಬರ್,05,2020(www.justkannada.in) : ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು 150 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ.

logo-justkannada-mysore

ಚಾರ್ಮಡಿ ಘಾಟ್ ನ ಬಿದರತಳದಲ್ಲಿ ಈ ಘಟನೆ ನಡೆದಿದೆ. ಸರಿಯಾಗಿ ರಸ್ತೆ ಮಾರ್ಗ ಕಾಣದೇ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಐವರೂ ಕಂದಕದಲ್ಲಿ ಸಿಲುಕಿದ್ದು, ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Driver,out,control,car,crashing,abyss,Five,protection,locals

key words : Driver-out-control-car-crashing-abyss-Five-protection-locals