ಕೆಎಸ್ ಒಯು ನೂತನ ಕುಲಪತಿಗಳಾಗಿ ಡಾ. ವಿದ್ಯಾಶಂಕರ್ ಅಧಿಕಾರ ಸ್ವೀಕಾರ…

Promotion

ಮೈಸೂರು,ಮೇ,30,2019(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ನೂತನ ಸಾರಥಿ ನೇಮಕ ಮಾಡಲಾಗಿದ್ದು, ಕೆಎಸ್ ಒಯುನ ನೂತನ ಕುಲಪತಿಯಾಗಿ ಡಾ.ವಿದ್ಯಾಶಂಕರ್  ಇಂದು ಅಧಿಕಾರ ಸ್ವೀಕರಿಸಿದರು.

ಡಾ.ವಿದ್ಯಾಶಂಕರ್  ಅವರಿಗೆ ಪ್ರೋ ಶಿವಲಿಂಗಯ್ಯ ಹೂ ಗುಚ್ಚ ನೀಡಿ ಸ್ವಾಗತಿಸಿದರು. ನಂತರ ಡಾ.ವಿದ್ಯಾಶಂಕರ್ ಅವರಿಗೆ ಕೆಎಸ್ ಒಯು ಕುಲಪತಿಗಳಾಗಿದ್ದ ಪ್ರೊ‌ ಶಿವಲಿಂಗಯ್ಯ ಅಧಿಕಾರ ಹಸ್ತಾಂತರ ಮಾಡಿದರು.  11 ಗಂಟೆಗೆ ಶಿವಲಿಂಗಯ್ಯ ಸೇವೆ ಮುಕ್ತಾಯವಾದ ಹಿನ್ನೆಲೆ ಇಂದಿನಿಂದ ಮುಕ್ತವಿವಿ ಜವಾಬ್ದಾರಿಯನ್ನ ನೂತನ ಕುಲಪತಿ ಡಾ.ವಿದ್ಯಾಶಂಕರ್ ವಹಿಸಿಕೊಂಡಿದ್ದಾರೆ.

ಡಾ.ವಿದ್ಯಾಶಂಕರ್ ಬೆಂಗಳೂರಿನ  ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ಇದೀಗ ಮೂರು ವರ್ಷಗಳ ಅವಧಿಗೆ ಕೆಎಸ್ ಓಯು ಕುಲಪತಿಗಳಾಗಿ ನೇಮಕವಾಗಿದ್ದಾರೆ.

Key words: Dr.vidyashankar Took over  as new Chancellor in KSOU.

#KSOU #Drvidyashankar #newChancellor