ಅಧ್ಯಾಪಕರ ಪಾಲಿಗೆ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರೇ ಲೋಕನಾಯಕ ; ಮೈಸೂರು ವಿವಿ ಕುಲಪತಿ

kannada t-shirts

ಮೈಸೂರು,ಸೆಪ್ಟೆಂಬರ್,05,2020(www.justkannada.in) ; ಅಧ್ಯಾಪಕರ ಪಾಲಿಗೆ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರೆ ಲೋಕನಾಯಕ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.

jk-logo-justkannada-logo

ಮೈಸೂರು ವಿಶ್ವವಿದ್ಯಾನಿಲಯ ಡಾ.ಎಸ್.ರಾಧಾಕೃಷ್ಣನ್ ತತ್ತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದ ವತಿಯಿಂದ ಶನಿವಾರ ವಿಜ್ಞಾನಭವನದಲ್ಲಿ ಆಯೋಜಿಸಿದ್ದ ‘’ಶಿಕ್ಷಕರ ದಿನಾಚರಣೆ’’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

Dr.Sarvepalli-role-faculty-Radhakrishnan-world-leader-Chancellor-Mysore-Vivi

ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಿಗೆ ಮಾದರಿಯಾಗುವಂತಹ ಎಲ್ಲಾ ಮೌಲ್ಯಗಳನ್ನು ಒಳಗೊಂಡಿದ್ದರು. ಅವರ ಶ್ರೇಷ್ಠ ಚಿಂತನೆಗಳನ್ನು ಈ ದಿನದಂದು ಸ್ಮರಿಸಲಾಗುವುದು ಎಂದರು.

ದೇಶ ಸುಭಿಕ್ಷವಾಗಿರುವುದಕ್ಕೆ ಶಿಕ್ಷಣದಿಂದ ಮಾತ್ರ ಸಾಧ್ಯ. ಯುವಜನಾಂಗವನ್ನು ಸರಿದಾರಿಯತ್ತ ನಡೆಸುವ ನಿಟ್ಟಿನಲ್ಲಿ ರಾಧಾಕೃಷ್ಣನ್ ಅವರ ಪಾತ್ರವು ಅಪಾರ. ಸ್ವಾಮಿ ವಿವೇಕಾನಂದ, ಕುವೆಂಪು, ರಾಧಾಕೃಷ್ಣನ್ ರಂತಹ ಮಹಾತ್ಮರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಆದರ್ಶ ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.

ಮೈಸೂರು ವಿವಿ ಸಂಜೆ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ.ಅನಂತರಾಮು ಅವರು ’ಅಧ್ಯಾಪಕ ಜೀವನ ಮೌಲ್ಯಗಳು’’ ವಿಷಯ ಕುರಿತು ಮಾತನಾಡಿ, ಶಿಕ್ಷಕ ವೃತ್ತಿಯು ಪುರಾತನ, ಪವಿತ್ರವಾದ ವೃತ್ತಿಯಾಗಿದೆ, ದಾನಗಳಲ್ಲಿಯೇ ಶ್ರೇಷ್ಠ ದಾನ ವಿದ್ಯಾದಾನವಾಗಿದೆ. ಶಿಕ್ಷಕರು ನಿತ್ಯ ಅಧ್ಯಯನಶೀಲರಾಗಿ ಮೌಲ್ಯಗಳನ್ನು ಬಿತ್ತುವ ಕಾರ್ಯಮಾಡಬೇಕು ಎಂದು ಹೇಳಿದರು.

ಗುರುವೆಂದರೆ ಬ್ರಹ್ಮ, ವಿಷ್ಣು, ಮಹೇಶ್ವರ ಈ ಮೂವರನ್ನು ಒಳಗೊಂಡಂತಹ ವಿಶೇಷ ವ್ಯಕ್ತಿ. ವಿದ್ಯಾರ್ಥಿಗಳನ್ನು ಬ್ರಹ್ಮನಂತೆ ತಿದ್ದುವ, ವಿಷ್ಣುವಂತೆ ಮೌಲ್ಯಗಳನ್ನು ಪಾಲಿಸುವ, ಮಹೇಶ್ವರನಂತೆ ಉತ್ತಮ ವಿಷಯಗಳೆಡೆಗೆ ನಡೆಸುವ ಕಾರ್ಯವನ್ನು ಮಾಡುತ್ತಾರೆ ಎಂದು ಹೇಳಿದರು.

ಶಿಕ್ಷಕರು ತಾವು ಬೋಧಿಸುವ ವಿಷಯದ ಕುರಿತು ಆಳವಾಗಿ ತಿಳಿದಿರಬೇಕು. ಅದಲ್ಲದೇ, ಇತರೆ ವಿಷಯಗಳ ಬಗ್ಗೆಯೂ ಸಾಮಾನ್ಯಜ್ಞಾನವಿರಬೇಕು. ಉತ್ತಮ ಸಂವಹನ ಕೌಶಲ್ಯವಿರಬೇಕು. ನಿರಂತರ ಅಧ್ಯಯನದಲ್ಲಿ ತೊಡಗುವ ಮೂಲಕ ಹೊಸ, ಹೊಸ ವಿಷಯಗಳನ್ನು ತಿಳಿದು ವಿದ್ಯಾರ್ಥಿಗಳಿಗೂ ಅದನ್ನು ತಿಳಿಸಬೇಕು ಎಂದು ಸಲಹೆ ನೀಡಿದರು.

ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥರಾದ ಶ್ರೀ ಸ್ವಾಮಿ ಯುಕ್ತೇಶಾನಂದಜಿ ಮಹಾರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿಯು ವಿಶೇಷವಾದ ವೃತ್ತಿಯಾಗಿದೆ. ರಾಧಕೃಷ್ಣ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಗುರು, ಶಿಷ್ಯ ಸಂಬಂಧವು ಅನಂತವಾಗಿದ್ದು, ಶಿಷ್ಯರನ್ನು ಹೆಜ್ಜೆ,ಹೆಜ್ಜೆಗೂ ಸರಿಯಾದ ದಾರಿಯಲ್ಲಿ ನಡೆಸುವುದು ಗುರುವಿನ ಕಾರ್ಯವಾಗಿದೆ ಎಂದರು.

 

Dr.Sarvepalli-role-faculty-Radhakrishnan-world-leader-Chancellor-Mysore-Vivi

ಗುರು ಎಂದರೆ ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ಹೊಂದಿದವರು ಎಂದರ್ಥ. ಹೀಗಾಗಿ, ಪರಿಪೂರ್ಣತೆಗೆ ಒತ್ತು ಕೊಡುವುದರ ಜೊತೆಗೆ ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಕಲಿಯಬೇಕು, ವಿದ್ಯಾರ್ಥಿಗಳಿಗೂ ಅದನ್ನು ಕಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ,ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್, ವಿಜ್ಞಾನ ಭವನದ ಸಂಯೋಜಕ ಚಂದ್ರನಾಯಕ್ ಇತರರು ಉಪಸ್ಥಿತರಿದ್ದರು.

key words ; Dr.Sarvepalli-role-faculty-Radhakrishnan-world-leader-Chancellor-Mysore-Vivi

 

website developers in mysore