ರಾಗಿಣಿ ಬಂಧನದಿಂದ ಬಿಜೆಪಿಗೆ ಮುಜುಗರವಿಲ್ಲ- ಸಚಿವ ಎಸ್.ಟಿ ಸೋಮಶೇಖರ್….

ಮೈಸೂರು.ಸೆಪ್ಟಂಬರ್,5,2020(www.justkannda.in): ಡ್ರಗ್ಸ್ ಮಾಫಿಯಾದಲ್ಲಿ ನಟಿ ರಾಗಿಣಿ ಸಿಲುಕಿದ್ದು ಸಿಸಿಬಿ ಪೊಲೀಸರು ಅವರನ್ನ ಬಂಧಿಸಿದ್ದಾರೆ. ಈ ಸಂಬಂಧ ರಾಗಿಣಿ ಬಂಧನದಿಂದ ಬಿಜೆಪಿಗೆ ಮುಜುಗರವಿಲ್ಲ. ಡ್ರಗ್ಸ್ ತಗೋ ಅಂತ ಬಿಜೆಪಿ ರಾಗಿಣಿಗೆ ಹೇಳಿರಲಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಡ್ರಗ್ಸ್ ವಿಚಾರದಲ್ಲಿ ಆ ಪಕ್ಷ ಈ ಪಕ್ಷ ಅಂತ ಬರಲ್ಲ. ಯಾವ ಪಕ್ಷದವರು ತಪ್ಪು ಮಾಡಿದರೂ ತಪ್ಪೆ. ಈ ಸಂಬಂಧ ಯಾರೆ ತಪ್ಪು ಮಾಡಿದರೂ ಕ್ರಮ ಕೈಗೊಳ್ಳುವಂತೆ  ಕ್ಯಾಬಿನೆಟ್‌ನಲ್ಲಿ  ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಡ್ರಗ್ಸ್ ವಿಚಾರದಲ್ಲಿ ಎಷ್ಟೇ ಪ್ರಭಾವ ಇರಲಿ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ…bjp-not-embarrassed-actor-ragini-arrest-minister-st-somashekhar

ಚಿತ್ರ ನಟ, ನಟಿಯರಿಗೆ ಸಮಾಜದಲ್ಲಿ ಜನಪ್ರಿಯತೆ ಇರುತ್ತೆ. ಅವರೇ ಡ್ರಗ್ಸ್ ಸೇವನೆ ಮಾಡಿದ್ರೆ ಸಮಾಜಕ್ಕೆ ಯಾವ ರೀತಿ ಸಂದೇಶ ರವಾನೆ ಆಗುತ್ತೆ. ಆದ್ದರಿಂದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಖುದ್ದು ಮುಖ್ಯಮಂತ್ರಿಗಳೇ ಪ್ರತಿ ದಿನವೂ ಡ್ರಗ್ಸ್ ಪ್ರಕರಣದ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಡ್ರಗ್ಸ್ ನಿಂದ ಯುವ ಸಮೂಹ ಹಾಳಾಗುತ್ತೆ.  ಆದ್ದರಿಂದ ಡ್ರಗ್ಸ್ ವಿಚಾರದಲ್ಲಿ ಎಷ್ಟೇ ಪ್ರಭಾವ ಇರಲಿ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

Key words: BJP – not -embarrassed –actor- Ragini- arrest- Minister -ST Somashekhar.