ಇಂದು ಅಣ್ಣಾವ್ರ 15ನೇ ವರ್ಷದ ಪುಣ್ಯಸ್ಮರಣೆ

Promotion

ಬೆಂಗಳೂರು, ಏಪ್ರಿಲ್ 12, 2021 (www.justkannada.in): ಇಂದು ನಟಸಾರ್ವಭೌಮ ಡಾ. ರಾಜ್​ಕುಮಾರ್​ ಅವರ 15ನೇ ವರ್ಷದ ಪುಣ್ಯಸ್ಮರಣೆ.

ಕೊರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ರಾಜ್​ ಕುಟುಂಬದವರು ಕೂಡ ಅಣ್ಣಾವ್ರ ಸಮಾಧಿಗೆ ಸರಳವಾಗಿ ಪೂಜೆ ಸಲ್ಲಿಸಿದ್ದಾರೆ.

ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ರಾಜ್​ ಸಮಾಧಿ ಬಳಿ ತೆರಳಿದ ಶಿವರಾಜ್​ಕುಮಾರ್​ ಅವರು ಮೇರುನಟನಿಗೆ ನಮನ ಸಲ್ಲಿಸಿದ್ದಾರೆ.

ಕೊರೊನಾ ಆತಂಕ ಇಲ್ಲದಿದ್ದರೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬರುತ್ತಿದ್ದರು. ನೆಚ್ಚಿನ ನಟನಿಗೆ ಪುಷ್ಪ ನಮನ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಎಲ್ಲವೂ ಸರಳವಾಗಿ ನೆರವೇರುತ್ತಿದೆ.