“ಅಸಾಮಾನ್ಯರಾದ ಸಾಮಾನ್ಯರು” : ಪೇಪರ್ ಬಾಯ್ ಪ್ರೊಫೆಸರ್, ಸೆಕ್ಯೂರಿಟಿ ಗಾರ್ಡ್ ಐಐಎಂ ಸಹಾಯಕ ಪ್ರಾಧ್ಯಾಪಕ

ಮೈಸೂರು,ಏಪ್ರಲ್,12,2021(www.justkannada.in) : ಪ್ರತಿಯೊಬ್ಬರು ಏನಾದರೂ ಸಾಧಿಸಬೇಕು ಎಂದು ಕನಸು ಕಾಣುವುದು ಸಹಜ. ಆ ಕನಸು, ನನಸಾಗಿಸಬೇಕೆಂದರೆ ಹಲವು ಸವಾಲುಗಳು ಎದುರಾಗುವುದು ಸಾಮಾನ್ಯ. ಯಾರು ಸವಾಲುಗಳನ್ನು ಮೆಟ್ಟಿ ಮುಂದೆ ಸಾಗುತ್ತಾರೆ. ಅವರಿಗೆ ಗೆಲುವು ಶತಸಿದ್ಧ. ಹೀಗೆ, ಹಲವು ರೀತಿಯಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿಲುಗಳನ್ನಾಗಿಸಿಕೊಂಡು ಸಾಧನೆಯ ಶಿಖರವನ್ನೇರಿದವರು ಈ ಇಬ್ಬರು ಅಸಾಮಾನ್ಯರು.Sanskrit Vivia,8th event,30 people,Ph.D,43graduates,M.Phil,Awarded 

ಸಾಮಾನ್ಯರು, ಅಸಾಮಾನ್ಯರಾಗಬಹುದು ಎಂಬುದಕ್ಕೆ ಸಾಕ್ಷಿ

ಪೇಪರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮೈಸೂರಿನ ಶಿವಕುಮಾರ್ ಅವರು ಪ್ರೊಫೆಸರ್ ಆಗಿದ್ದು, ಕಾವಲುಗಾರನಾಗಿದ್ದ ರಂಜಿತ್ ರಾಮಚಂದ್ರನ್ ಅವರು ಐಐಎಂ ಸಹಾಯಕ ಪ್ರಾಧ್ಯಾಪಕರಾದ ಯಶೋಗಾಥೆಯು ಸಾಮಾನ್ಯರು, ಅಸಾಮಾನ್ಯರಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

“ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು; ಕನಸುಗಳೇ ಇಲ್ಲದ ದಾರಿಯಲ್ಲಿ ಹೇಗೆ ನಡೆಯಲಿ?”

ಸಾಹಿತಿ ಗಿರೀಶ್ ಕಾರ್ನಾಡ್ ಅವರು “ಯಯಾತಿ” ನಾಟಕದಲ್ಲಿ ಹೇಳುವಂತೆ “ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು; ಕನಸುಗಳೇ ಇಲ್ಲದ ದಾರಿಯಲ್ಲಿ ಹೇಗೆ ನಡೆಯಲಿ?” ಎಂಬಂತೆ ಟೀಕೆಗಳನ್ನು ಲೆಕ್ಕಿಸದೇ, ಅವಮಾನವನ್ನು ಬಹುಮಾನವನ್ನಾಗಿಸಿಕೊಂಡು, ವಿವಿಧ ರೀತಿ ಎದುರಾದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ, ಪ್ರಾಮಾಣಿಕ ಪ್ರಯತ್ನದಿಂದ ಕನಸುಗಳ ಬೆನ್ನಟ್ಟಿ ಗುರಿಮುಟ್ಟುವ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

ಪೇಪರ್ ಬಾಯ್ ಇದೀಗ ಪ್ರೊಫೆಸರ್

ಮನೆ,ಮನೆಗೆ ಪೇಪರ್ ಹಾಕುವ ಕಾಯಕವನ್ನು ನಂಬಿದ ಬಿಎಂಶ್ರೀ ನಗರದ ಚೆಲುವೇಗೌಡ,ಸಣ್ಣಮ್ಮ ದಂಪತಿಯ ಪುತ್ರ ಶಿವಕುಮಾರ್. ಬಡತನದ ಬೆಂಕಿಯಲ್ಲಿದ್ದರೂ, ವಿದ್ಯೆ ಇಲ್ಲದಿದ್ದರೆ ಗೌರವ ಸಿಗುವುದಿಲ್ಲ ಎಂಬುದನ್ನು ಅರಿತು ಉನ್ನತ ಶಿಕ್ಷಣ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದರು. ಬಡತನದ ಕಾರಣಕ್ಕೆ ವಿದ್ಯಾಭ್ಯಾಸ ತೊರೆದು, ಬೆಳಗ್ಗೆ ಪತ್ರಿಕೆ ಹಂಚುವುದು, ಮಧ್ಯಾಹ್ನ ಅಂಗಡಿಯೊಂದರಲ್ಲಿ, ಮತ್ತೆ ಸಂಜೆ ಪತ್ರಿಕಾಲಯಗಳಲ್ಲಿ ಆಫೀಸ್ ಬಾಯ್ ಆಗಿ ದುಡಿದು ಬದುಕು ಸಾಗಿಸುತ್ತಿದ್ದರು.

ಸತತ ಏಳು ವರ್ಷಗಳ ನಂತರ ಶಿಕ್ಷಣಕ್ಕೆ ಪ್ರವೇಶ

ಶಿವಕುಮಾರ್ ಅವರ ಶೈಕ್ಷಣಿಕ ಅರ್ಹತೆ ಪರಿಗಣಿಸಿ ಪ್ರತಿಷ್ಠಿತ ಸಂಸ್ಥೆಯೊಂದು ಉದ್ಯೋಗ ನೀಡಲಿಲ್ಲ. ಇದರಿಂದ ಬೇಸರಗೊಂಡ ಶಿವಕುಮಾರ್, ವಿದ್ಯಾಭ್ಯಾಸ ಮೊಟಕುಗೊಳಿಸಿದ ಸತತ ಏಳು ವರ್ಷಗಳ ನಂತರ ಮತ್ತೆ ಕಾಲೇಜು ಶಿಕ್ಷಣಕ್ಕೆ ಪ್ರವೇಶ ಪಡೆದರು. ಕಂಪ್ಯೂಟರ್ ತರಬೇತಿದಾರನಾಗಿ ಕರ್ತವ್ಯ ನಿರ್ವಹಿಸುತ್ತಲೇ, ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಪೂರ್ಣಗೊಳಿಸಿದ್ದು, ಸದ್ಯ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

ಐಐಎಂ ಸಹಾಯಕ ಪ್ರಾಧ್ಯಾಕನಾದ ಕಾವಲುಗಾರ ರಂಜಿತ್ ರಾಮಚಂದ್ರನ್

 Extraordinary-Commoners-Paper Boy-Professor-Security guard-IIM Assistant Professor

ರಂಜಿತ್ ರಾಮಚಂದ್ರನ್ ಅವರ ತಂದೆ ಟೈಲರ್, ತಾಯಿ ಬೇಬಿ ನರೇಗಾ ಯೋಜನೆ ಅಡಿ ಕೂಲಿ ಕಾರ್ಮಿಕರು, ಇವತ್ತು, ನಾಳೆ ಬಿದ್ದು ಹೋಗುವಂತಹ ಮನೆ. ಹೀಗೆ ಹಲವು ಕಷ್ಟಗಳ ನಡುವೆ ಕಾಸರಗೋಡಿನಲ್ಲಿ ಬಿಎಸ್ ಎನ್ ಎಲ್ ಕಚೇರಿಯಲ್ಲಿ ರಾತ್ರಿ ಕಾವಲುಗಾರನಾಗಿ ಕಾರ್ಯನಿವರ್ವಹಿಸುತ್ತ ಕಠಿಣ ಪರಿಶ್ರಮದ ಫಲವಾಗಿ ಉನ್ನತ ಶಿಕ್ಷಣ ಪಡೆದು ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ (ಐಐಎಂ-ರಾಂಚಿ)ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಕ್ರೈಸ್ಟ್ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಶೀಘ್ರವೇ ಐಐಎಂ ರಾಂಚಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಪದವಿವರೆಗೆ ಮಾತೃಭಾಷೆ ಮಲಯಾಳಂ ನಲ್ಲಿ ಓದಿರುವ ಅವರಿಗೆ ಉನ್ನತ ಶಿಕ್ಷಣ, ಪಿಎಚ್.ಡಿ ಪಡೆಯಲು ಭಾಷೆ ಅಡ್ಡಿಯಾಗಲೇ ಇಲ್ಲ ಎಂದು ತಿಳಿಸಿದ್ದಾರೆ.

ಸಾಧಕನ ಪಯಣಕ್ಕೆ 37000 ಸಾವಿರ ಮಂದಿ ಲೈಕ್

ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಬೆಳಗ್ಗೆ ಮತ್ತೆ ಭವಿಷ್ಯದ ಕನಸು ನನಸಾಗಿಸಲು ಶ್ರಮಪಡುತ್ತಿದ್ದೆ ಎಂದು ತಮ್ಮ ಬದುಕಿನ ಪಯಣದ ಕುರಿತು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಅವರ ಬರಹಕ್ಕೆ ಅಪಾರ ಮೆಚ್ಚುಗೆವ್ಯಕ್ತವಾಗಿದ್ದು, 37000 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಬಿದ್ದುಹೋಗುವಂತಿರುವ ತಮ್ಮ ಮನೆಯ ಚಿತ್ರವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಅವರು, ಒಳ್ಳೆಯದರ ಬಗ್ಗೆಯೇ ಕನಸು ಕಾಣಬೇಕು ಅದನ್ನು ನನಸಾಗಿಸಲು ಶ್ರಮಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Extraordinary-Commoners-Paper Boy-Professor-Security guard-IIM Assistant Professor

key words : Extraordinary-Commoners-Paper Boy-Professor-Security guard-
IIM Assistant Professor