ಮಂಡ್ಯ ವಿವಿಯ ಹಂಗಾಮಿ ಕುಲಸಚಿವರಾಗಿ ಡಾ.ಎಂ ರಾಮೇಗೌಡ ನೇಮಕ…

Promotion

 

ಮಂಡ್ಯ,ಜನವರಿ,29,2021(www,justkannada.in): ಮಂಡ್ಯ ವಿಶ್ವ ವಿದ್ಯಾನಿಲಯದ ಹಂಗಾಮಿ ಕುಲಸಚಿವ(ಆಡಳಿತ)ರಾಗಿ  ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ಸಹಪ್ರಾಧ್ಯಾಪಕಾರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಎಂ. ರಾಮೇಗೌಡ ಅವರನ್ನ ನೇಮಕ ಮಾಡಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. Dr. M Ramegowda -appointed - interim  - Registrar –Mandya university

ಮಂಡ್ಯ ವಿವಿಯ ಹಂಗಾಮಿ ಕುಲಸಚಿವರಾಗಿ ಸೇವಾ ಹಿರಿತನದ ಮೇಲೆ ಡಾ.ಎಂ ರಾಮೇಗೌಡ ಅವರನ್ನ ನೇಮಕ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನವೇ ಸಹ ಪ್ರಾಧ್ಯಾಪಕರು,  ನಂಜನಗೂಡು ಪ್ರಥಮದರ್ಜೆ ಕಾಲೇಜು ಇಲ್ಲಿನ ಕರ್ತವ್ಯದಿಂದ ರಾಮೇಗೌಡ ಅವರನ್ನ ಬಿಡುಗಡೆಗೊಳಿಸಲಾಗಿದೆ. ಹಾಗೆಯೇ ಮಂಡ್ಯ ವಿಶ್ವ ವಿದ್ಯಾನಿಲಯ ಕುಲಪತಿಗಳ ಬಳಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಡಾ.ಎಂ ರಾಮೇಗೌಡ ಅವರಿಗೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. Dr. M Ramegowda -appointed - interim  - Registrar –Mandya university

Key words: Dr. M Ramegowda -appointed – interim  – Registrar –Mandya university