ಡಾ. ಬಿ. ಆರ್. ಅಂಬೇಡ್ಕರ್ ನಿವಾಸ ಧ್ವಂಸಗೊಳಿಸಿರುವ ಘಟನೆಗೆ ಖಂಡನೆ: ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ದ ಪ್ರೊ.  ಮಹೇಶ್ ಚಂದ್ರ ಗುರು ಕಿಡಿ..

ಮೈಸೂರು,ಜು,9,2020(www.justkannada.in):  ಮುಂಬೈನಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರ ನಿವಾಸವನ್ನು ಧ್ವಂಸಗೊಳಿಸಿರುವ ಘಟನೆಯನ್ನ   ಪ್ರಗತಿಪರ ಚಿಂತಕ ಪ್ರೊಫೆಸರ್ ಮಹೇಶ್ ಚಂದ್ರ ಗುರು  ಖಂಡಿಸಿದ್ದಾರೆ.jk-logo-justkannada-logo

ನಗರದ ಜಲದರ್ಶಿನಿಯಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು, ಮುಂಬೈನಲ್ಲಿರುವ ಅಂಬೇಡ್ಕರ್ ನಿವಾಸ ಧ್ವಂಸಕ್ಕೆ ಮೂಲಭೂತವಾದಿಗಳು ಕಾರಣವಾಗಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ, ಆರ್.ಎಸ್‌‌‌.ಎಸ್ ನಾಯಕರು ಇದುವರೆಗೂ ಧ್ವನಿ ಎತ್ತಿಲ್ಲ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಇವರೆಲ್ಲರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕಿಡಿಕಾರಿದರು.Dr. B. R Ambedkar –residence- mysore-Mahesh Chandra Guru - Prime Minister –Modi

ಮನೆ ಧ್ವಂಸ ಮಾಡಲು ಅಂಬೇಡ್ಕರ್ ಏನೂ ಗೋಡ್ಸೆಯಲ್ಲ, ಅಂಬೇಡ್ಕರ್ ಮನೆ ಧ್ವಂಸ ಮಾಡಿದ ಮಾತ್ರಕ್ಕೆ ಅವರ ತತ್ವ ಸಿದ್ದಾಂತಗಳನ್ನು ನಾಶ ಮಾಡಲು ಸಾಧ್ಯವಿಲ್ಲ. ಅಂಬೇಡ್ಕರ್ ಮನೆ ಧ್ವಂಸದ ಹಿಂದೆ ಮಹಾರಾಷ್ಟ್ರದಲ್ಲಿ ಆಡಳಿತ ‌ನಡೆಸುತ್ತಿರುವ ಶಿವಸೇನೆ ಕೈವಾಡವಿದೆ. ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಎ‌‌ನ್‌‌ಸಿಪಿ‌ ಪಕ್ಷಗಳು ಈ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಪ್ರೊ. ಮಹೇಶ್ ಚಂದ್ರ ಗುರು ಹೇಳಿದರು.

Key words: Dr. B. R Ambedkar –residence- mysore-Mahesh Chandra Guru – Prime Minister –Modi