ಬೆಳಗಾವಿಯಲ್ಲಿ ಈ ಬಾರಿ ಚಳಿಗಾಲದ ಅಧಿವೇಶನ ನಡೆಯೋದು ಡೌಟ್…

Promotion

ಬೆಳಗಾವಿ,ಸೆ,14,2019(www.justkannada.in): ಧಾರಾಕಾರ ಮಳೆ ಕೃಷ್ಣ ನದಿ ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ನೆರೆ ಹಾವಳಿ ಸಂಭವಿಸಿ ಮನೆ ಆಸ್ತಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ನಡುವೆ ನೆರೆ ಎಫೆಕ್ಟ್ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೂ ತಟ್ಟಿದೆ.

ಹೌದು, ಬೆಳಗಾವಿಯಲ್ಲಿ ನೆರೆ ಹಾವಳಿಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಹಿನ್ನೆಲೆ, ಬೆಳಗಾವಿಯಲ್ಲಿ ಈ ಬಾರಿ ಚಳಿಗಾಲದ ಅಧಿವೇಶನ ನಡೆಯೋದು ಅನುಮಾನವಾಗಿದೆ. ಪ್ರತೀ ವರ್ಷ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲೇ ನಡೆಯುತ್ತಿತ್ತು. ಆದರೆ ಈ ಬಾರಿ  ಪ್ರವಾಹ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸೋದು ಡೌಟ್ ಆಗಿದೆ.

ಈ ಕುರಿತು ಸಿಎಂ ಜೊತೆ ಚರ್ಚಿಸಿ ತೀರ್ಮಾನ ‌ಮಾಡುವುದಾಗಿ  ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಗೃಹ ಕಚೇರಿದಲ್ಲಿ ಮಾತನಾಡಿದ ಆರ್.ಅಶೋಕ್,  ನೆರೆಪೀಡಿತ ವಿಚಾರಕ್ಕೆ ಮಾತ್ರ ಸಿಎಂ ಸಭೆ ಕರೆದಿಲ್ಲ. ಶಾಸಕರ ಕುಂದುಕೊರತೆಗಳ ಆಲಿಕೆ ಬಗ್ಗೆ ಸಭೆ ಕರೆದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇವೆ. ಬೆಳಗಾವಿ ಯಲ್ಲಿ ಈ ಬಗ್ಗೆ ಅಧಿವೇಶನ ನಡೆಸೋದು ಕಷ್ಟ. ಈ ಬಗ್ಗೆ ಇಂದು ಸಿಎಂ ಜೊತೆ ಚರ್ಚೆ ನಡೆಸಲಾಗುವುದು ಎಂದರು.

Key words: Doubt – winter session – Belgavi