ವಿ.ಸೋಮಣ್ಣ ನನಗಿಂತ ಅನುಭವವುಳ್ಳ ರಾಜಕಾರಣಿ-ಶಾಸಕ ಎಸ್.ಎ ರಾಮದಾಸ್ ಹೇಳಿಕೆ…

ಮೈಸೂರು,ಸೆ,14,2019(www.justkannada.in): ಜಿಲ್ಲಾ ಉಸ್ತುವಾರಿ ಸಚಿವರು  ಅನುಭವವುಳ್ಳವರು. ಸೋಮಣ್ಣ ನನಗಿಂತ ಸೀನಿಯರ್ ರಾಜಕಾರಣಿ, ನನಗಿಂತ ಅನುಭವವುಳ್ಳ ರಾಜಕಾರಣಿ ಎಂದು ಶಾಸಕ ಎಸ್,ಎ ರಾಮದಾಸ್ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಎಸ್,ಎ ರಾಮದಾಸ್,  ವಿಶ್ವವಿಖ್ಯಾತ ಮೈಸೂರು ದಸರಾ ಅಭಿವೃದ್ಧಿ ಕಾಮಗಾರಿಗಳು ಬಹಳ ವೇಗವಾಗಿ ನಡೆಯುತ್ತಿವೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಜೊತೆ ಹಲವು ಸಭೆಗಳನ್ನ ನಡೆಸಿದ್ದಾರೆ.ಕಾಮಗಾರಿಗಳಿಗೆ ಬೇಕಾದ ಹಣವನ್ನು ಈಗಾಗಲೇ ಸರ್ಕಾರದಿಂದ‌ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳ ವಿಚಾರದಲ್ಲಿ ಯಾವುದೇ ಗೊಂದಲ್ಲವಿಲ್ಲ. ನಾನು ಸಹ ವೇಗವಾಗಿ ಕಾಮಗಾರಿಗಳನ್ನ ಮಾಡಲು ಸೂಚನೆ ನೀಡುತ್ತೇನೆ. ಆದಷ್ಟು ಬೇಗ ಎಲ್ಲಾ ಕಾಮಗಾರಿಗಳು ಶುರುವಾಗಲಿವೆ ಎಂದರು.

ಇನ್ನು ವಸ್ತು ಪ್ರದರ್ಶನ ಟೆಂಡರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ರಾಮದಾಸ್, ಈಗಾಗಲೇ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ. ಆದಷ್ಟು ಬೇಗ ಎಲ್ಲಾ ಕಾರ್ಯವನ್ನ ಮುಗಿಸುತ್ತೇವೆ ಎಂದು  ತಿಳಿಸಿದರು.

ದಸರಾ ಮಹೋತ್ಸವಕ್ಕೆ ಸಿಎಂ ಆಹ್ವಾನ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್  ಗೈರಾದ ವಿಚಾರ ಕುರಿತು ಮಾತನಾಡಿದ ಶಾಸಕ ಎಸ್. ಎ ರಾಮದಾಸ್, ಅನ್ಯ ಕಾರ್ಯಕ್ರಮಗಳ ನಿಮಿತ್ತ ತೆರಳಲಾಗಲಿಲ್ಲ, ನೆನ್ನೆ  ಇಂದು ಎರಡು ದಿನಗಳ ಕಾಲ ನನಗೆ  ಮುಂಚಿತವಾಗಿಯೇ ಕಾರ್ಯಕ್ರಮ ನಿಗದಿಯಾಗಿತ್ತು.  ಹೀಗಾಗಿ ಸಿಎಂ  ಆಹ್ವಾನ ನೀಡುವ ಕಾರ್ಯಕ್ಕೆ ತೆರಳಲಾಗಿಲ್ಲ..ಎರಡು  ಪೂರ್ವನಿಯೋಜಿತ ಕಾರ್ಯಕ್ರಮ ಇದ್ದ ಕಾರಣಕ್ಕಷ್ಟೇ  ನಾನು ತೆರಳಲಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.

Key words: V. Somanna – experienced -politician -MLA -SA Ramadas -mysore