ರಾಜ್ಯದಲ್ಲಿ ಡಬಲ್ ಸ್ಟೇರಿಂಗ್ ಸರ್ಕಾರ: ಸಿಎಂ ಸೈಲೆಂಟ್, ಡಿಸಿಎಂ ವೈಲೆಂಟ್- ಆರ್.ಅಶೋಕ್ ಟೀಕೆ.

Promotion

ಬೆಂಗಳೂರು,ಮೇ,26,2023(www.justkannada.in): ರಾಜ್ಯದಲ್ಲಿ ಡಬಲ್ ಸ್ಟೇರಿಂಗ್ ಸರ್ಕಾರ ಬಂದಿದೆ.  ಈ ಸರ್ಕಾರದಲ್ಲಿ ಸಿಎಂ ಸೈಲೆಂಟ್, ಡಿಸಿಎಂ ವೈಲೆಂಟ್ ಆಗಿರುತ್ತಾರೆ ಎಂದು ಮಾಜಿ ಸಚಿವ  ಆರ್.ಅಶೋಕ್ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್,  ಪ್ರತಿ ಸಭೆಯಲ್ಲೂ ಸಿಎಂಗಿಂತಲೂ ಡಿಸಿಎಂ ಮೊದಲು ಮಾತನಾಡುತ್ತಾರೆ.   ಪೊಲೀಸರು ಹಿಂದೂ ಸಂಘಟನೆಗಳಿಗೆ ಡಿಸಿಎಂ ಧಮ್ಕಿ ಹಾಕುತ್ತಿದ್ದಾರೆ . ಇನ್ನೂ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿಲ್ಲ. ಇದು ರಾಜ್ಯದ ಜನರಿಗೆ ಸರ್ಕಾರ  ಮಾಡಿದ ಮೋಸ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ,  ಪ್ರಿಯಾಂಕ ಗಾಂಧಿ ಬಂದ ಗ್ಯಾರಂಟಿ ಘೋಷಣೆ ಮಾಡಿದರು. ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದರು ಗ್ಯಾರಂಟಿ ಕಾರ್ಡ್ ಗೆ ಸಿದ್ಧರಾಮಯ್ಯ,  ಡಿಕೆಶಿ ಸಹಿ ಮಾಡಿಕೊಟ್ಟರು ದಾರಿಯಲ್ಲಿ ಹೋಗುವವರಿಗೆ ಗ್ಯಾರಂಟಿ ಕಾರ್ಡ್ ಕೊಟ್ಟರು ಎಂದು ಆರ್.ಅಶೋಕ್ ಹರಿಹಾಯ್ದರು.

Key words: Double -Staring -Government – R.Ashok