ಕತ್ತೆಗಳು ಸಾರ್ ಕತ್ತೆಗಳು! ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ಗೆ ಮುಜುಗರ ತಂದ ‘ಡಾಂಕಿ ಕಹಾನಿ!’

ಬೆಂಗಳೂರು, ಜೂನ್ 13, 2021 (www.justkannada.in): ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಅಧಿಕವಾಗಿದ್ದು, ಆದರೆ ಈ ವರ್ಷ ಇವುಗಳ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ ಕಂಡುಬಂದಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಇವುಗಳ ಸಂಖ್ಯೆ 1 ಲಕ್ಷ ಹೆಚ್ಚಳವಾಗಿದ್ದು, ಸದ್ಯ 56 ಲಕ್ಷ ಕತ್ತೆಗಳಿವೆ.

ಈ ನಡುವೆ ಪಾಕಿಸ್ತಾನದ ಪ್ರತಿಪಕ್ಷಗಳು ಪ್ರಧಾನಿ ಇಮ್ರಾನ್‌ ಖಾನ್‌ಗೆ ಮುಜುಗರ ತರುವಂಥ ಹೇಳಿಕೆಗಳನ್ನು ಘೋಷಿಸುತ್ತಿದ್ದಾರೆ!

ಪಾಕಿಸ್ತಾನದ ವಿತ್ತ ಸಚಿವ ಶೌಕತ್ ತಾರಿನ್ 2020-21ರ ಆರ್ಥಿಕ ಸಮೀಕ್ಷೆ ಅಂಕಿ ಅಂಶಗಳನ್ನು ಪ್ರಕಟಿಸುತ್ತಿರುವ ಸಂದರ್ಭದಲ್ಲಿ ಕತ್ತೆಗಳ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಕೂಡಲೇ ಪ್ರತಿಪಕ್ಷಗಳು, ನಮಗೆ ಕತ್ತೆಯ ಸರ್ಕಾರ ಬೇಡ…. ‘ಡಾಂಕಿ ರಾಜಾ ಕಿ ಸರ್ಕಾರ ನಹೀ ಚಲೇಗಿ ನಹೀ ಚಲೇಗಿ’ (ಕತ್ತೆ ರಾಜನ ಸರ್ಕಾರ ನಮಗೆ ಬೇಡ, ನಮಗೆ ಬೇಡ) ಎಂದು ಘೋಷಣೆ ಕೂಗಿವೆ.