ವೈದ್ಯರು ಜನೌಷಧವನ್ನೆ ಶಿಫಾರಸು ಮಾಡಿ ಔಷಧ ಚೀಟಿ ನೀಡಿ : ಸಚಿವ ಡಿ.ವಿ.ಸದಾನಂದ ಗೌಡ ಸೂಚನೆ

ಬೆಂಗಳೂರು,ಮಾರ್ಚ್,04,2021(www.justkannada.in) : ದೇಶದ ಜನಸಾಮಾನ್ಯರಿಗೆ ವೈದ್ಯರು ಜನೌಷಧವನ್ನೆ ಶಿಫಾರಸು ಮಾಡಿ ಔಷಧ ಚೀಟಿ ನೀಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಸೂಚನೆ ನೀಡಿದ್ದಾರೆ.

jk

ಬೇರೆ ಔಷಧಗಳಿಗೆ ಹೋಲಿಸಿದರೆ ಜನೌಷಧ ಮಳಿಗೆಗಳಲ್ಲಿ ಶೇ೧೦ ರಿಂದ ಶೇ೯೦ರಷ್ಟು ಕಡಿಮೆ ದರಕ್ಕೆ

ದೇಶದ ೭೩೪ ಜಿಲ್ಲೆಗಳಲ್ಲಿ ಈಗಾಗಲೇ ೭೫೦೦ಕ್ಕಿಂತ ಹೆಚ್ಚು ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ೭೪೫ ನಮೂನೆಯ ಔಷಧಗಳು ಮತ್ತು ೧೧೭ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಬೇರೆ ಔಷಧಗಳಿಗೆ ಹೋಲಿಸಿದರೆ ಜನೌಷಧ ಮಳಿಗೆಗಳಲ್ಲಿ ಶೇ೧೦ ರಿಂದ ಶೇ೯೦ರಷ್ಟು ಕಡಿಮೆ ದರಕ್ಕೆ ಗುಣಮಟ್ಟದ ಔಷಧಗಳು ಲಭ್ಯವಾಗುತ್ತಿವೆ ಎಂದು ಹೇಳಿದರು.

ರಾಜ್ಯದ ಜನರಿಗೆ ಸುಮಾರು ೮೦೦ ಕೋಟಿ ರೂಪಾಯಿ ಉಳಿತಾಯ

doctor-People-medicine-Recommended-Drug-voucher-Must provide-Minister-D.V.SadanandaGowda

ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಗರಿಷ್ಠ ೮೬೫ ಜನೌಷಧ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅವು ಔಷಧ ಮಾರಾಟದಲ್ಲೂ ಹೊಸ ದಾಖಲೆ ಸೃಷ್ಟಿಸಿವೆ. ೨೦೨೦-೨೧ರ ಸಾಲಿನಲ್ಲಿ ೧೩೧ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದರಿಂದ ರಾಜ್ಯದ ಜನರಿಗೆ ಸುಮಾರು ೮೦೦ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಸದಾನಂದ ಗೌಡ ವಿವರ ನೀಡಿದರು.

key words : doctor-People-medicine-Recommended-Drug-voucher-Must provide-Minister-D.V.SadanandaGowda