ಡಿಕೆಶಿ ಮತ್ತೆ ಜೈಲಿಗೆ ಹೋಗ್ತಾರೆಂಬ ಹೇಳಿಕೆ: ಷರತ್ತು ಹಾಕಿ ಮೈತ್ರಿ ಮಾಡಿಕೊಂಡಿರಬೇಕು-ಹೆಚ್.ಡಿಕೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಟಾಂಗ್

Promotion

ಬೆಂಗಳೂರು,ಅಕ್ಟೋಬರ್,10,2023(www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ತಿಹಾರ್ ಜೈಲಿಗೆ ಹೋಗ್ತಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,  ಇವರು ಕಂಡೀಷನ್ ಹಾಕಿಕೊಂಡು ಮೈತ್ರಿ ಮಾಡಿಕೊಂಡಿರಬೇಕು. ಅಮಿತ್ ಶಾ ಜೊತೆ ಷರತ್ತು ಹಾಕಿ ಮೈತ್ರಿ ಮಾಡಿಕೊಂಡಿರಬೇಕು.ಯಾವಕಾರಣಕ್ಕೆ ಜೈಲಿಗೆ ಹೋಗ್ತಾರೆ ಅಂತಾ ಹೆಚ್.ಡಿಕೆ  ಸ್ಪಷ್ಟವಾಗಿ  ಹೇಳಬೇಕು ಅಲ್ವಾ ಎಂದು ತಿರುಗೇಟು ನೀಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಪತನ ಖಚಿತ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ಖಾನ್,  ‘ನಾನು ಕುಮಾರಸ್ವಾಮಿ ಜೊತೆಗೆ ಇದ್ದವನು ಯಾವುದಾದರೂ ಸರ್ಕಾರ ಐದು ವರ್ಷ ನಡೆಯಲಿದೆ ಎಂದು ಹೇಳಿದ್ದಾರಾ?, ಯಡಿಯೂರಪ್ಪ , ಬೊಮ್ಮಾಯಿ ಸರ್ಕಾರ ಬಿಳುತ್ತೆ ಅಂದ್ರು, ಅಮೇಲೆ ಇವರದ್ದೇ ಸರ್ಕಾರ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. ಹೇಗೆ ಸರ್ಕಾರ ಬೀಳಲು ಸಾಧ್ಯ ಎಂದು ಪ್ರಶ್ನಿಸಿದರು.

‘ಬಿಜೆಪಿ 104 ಶಾಸಕರು ಇದ್ದುಕೊಂಡು ಅಪರೇಷನ್ ಕಮಲ ಮಾಡಿ 4 ವರ್ಷ ಸರ್ಕಾರ ನಡೆಸಿದರು.  ನಾವು 137 + 3 ಒಟ್ಟು 140 ಇದ್ದೇವೆ. ಸರ್ಕಾರ ಹೇಗೆ ಬಿಳುತ್ತೆ, ಕುಮಾರಸ್ವಾಮಿ ಅವರದ್ದು ರಾತ್ರಿ ಕನಸು ಹಗಲು ಕಾಣ್ತಿದ್ದಾರೆ. ಸರ್ಕಾರ ಹೇಗೆ ಪತನಾವಾಗುತ್ತೆ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು ಎಂದು ಚಾಟಿ ಬೀಸಿದರು.

Key words: DK shivakumar -jail -again -Statement- – Minister -Jameer Ahmed Khan – HDK