ಕಾಂಗ್ರೆಸ್ ದಿವಾಳಿ ಎಂಬ ಸಿಎಂ ಹೇಳಿಕೆಗೆ ಡಿ.ಕೆ ಶಿವಕುಮಾರ್ ತಿರುಗೇಟು.

Promotion

ಬೆಂಗಳೂರು,25,2022(www.justkannada.in):  ಕಾಂಗ್ರೆಸ್ ದಿವಾಳಿಯಾಗಿದೆ ಎಂದು ಹೇಳಿಕೆ ನೀಡಿದ್ಧ ಸಿಎಂ ಬಸವರಾಜ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.

 ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ದಿವಾಳಿಯಾಗಿದೆ ಅಂತ  ಸಿಎಂ ಹೇಳಿದ್ರು. ಆದರೆ ಕಾಂಗ್ರೆಸ್  ಟಿಕೆಟ್ ಗಾಗಿ ಸಾವಿರಾರು ಅರ್ಜಿಗಳು ಬಂದಿವೆ.  ಅವರ ಹಿನ್ನೆಲೆ ಜವಾಬ್ದಾರಿ , ಪಕ್ಷಕ್ಕಾಗಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿ  ಟಿಕೆಟ್ ನೀಡಲಾಗುತ್ತದೆ ಎಂದರು.

ಬಿಜೆಪಿ ವೋಟಿಗಾಗಿ ಏನು ಮಾಡಿದ್ರು ಅಂತಾ ಗೊತ್ತಿದೆ. ಹೀಗಾಗಿ ಹುಷಾರಾಗಿರಬೇಕು. ಯಾರೇ ಆದರೂ ಸರಿ ಒಂದೇ ಟಿಕೆಟ್ ಸಿಗೋದು ಎಲ್ಲರೂ  ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: DK Shivakumar -CM’s- statement – Congress