ಡಿ.ಕೆ ಶಿವಕುಮಾರ್ ಬಂಧನ  ರಾಜಕೀಯ ಪ್ರೇರಿತ ಅನ್ನೋದೆ ರಾಜಕೀಯ- ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಗೃಹ ಸಚಿವ ಬಸವರಾಜ ಬೊಮ್ಮಾಯಿ….

Promotion

ಹುಬ್ಬಳ್ಳಿ,ಸೆ,5,2019(www.justkannada.in):   ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ,ಕೆ ಶಿವಕುಮಾರ್ ಬಂಧಿಸಿರುವುದು ರಾಜಕೀಯ ಪ್ರೇರಿತ ಅನ್ನುವುದೇ ರಾಜಕೀಯ ಎಂದು ಕಾಂಗ್ರೆಸ್ ಆರೋಪಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಮನಗರ, ಕನಕಪುರದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

ಹಾಗೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಹಿತಕರ ಘಟನೆ ನಡೆದಿವೆ. ಡಿಕೆ ಶಿವಕುಮಾರ್ ಬಂಧನದಿಂದ ಯಾವುದೇ ಸಂತೋಷವು ಇಲ್ಲ ಖುಷಿಯೂ ಇಲ್ಲ. ಕಾನೂನು ಇದೆ ಅದನ್ನ ಕಾಪಾಡಬೇಕಲ್ಲವೇ..? ತನಿಖೆ ಬಳಿಕ ವಾಸ್ತವ ತಿಳಿದು ಬರಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Key words:  DK Shivakumar- arrest – politically –motivated- Politics -Home Minister- Basavaraja Bommai