ವೃತ್ತಿ ಜೀವನದ 30ನೇ ಗ್ರ್ಯಾನ್‌ ಸ್ಲ್ಯಾಮ್‌ ಫೈನಲ್’ಗೆ ಜೊಕೋವಿಕ್

Promotion

ಬೆಂಗಳೂರು, ಜುಲೈ 10, 2021 (www.justkannada.in): ನೊವಾಕ್ ಜೊಕೋವಿಕ್ ತನ್ನ ವೃತ್ತಿ ಜೀವನದ 30ನೇ ಗ್ರ್ಯಾನ್‌ ಸ್ಲ್ಯಾಮ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಸೆಮಿಫೈನಲ್‌ ಪಂದ್ಯದಲ್ಲಿ ಕೆನಡಾದ ಡೆನಿಸ್ ಶಪೋವೊಲೊವ್ ಸೋಲಿಸಿರುವ ಜೊಕೋವಿಕ್ ಈ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೋವಿಕ್ ಅವರು ಡೆನಿಸ್ ಶಪೋವೊಲೊವ್ ವಿರುದ್ಧ 7-6 (7/3), 7-5, 7-5ರ ಜಯ ಗಳಿಸಿದ್ದಾರೆ.

ವಿಶ್ವ ನಂ. 1 ಜೊಕೋವಿಕ್‌ಗೆ ಇದು 7ನೇ ವಿಂಬಲ್ಡನ್ ಫೈನಲ್‌ ಪಂದ್ಯ. ವಿಂಬಲ್ಡನ್‌ನಲ್ಲಿ ಜೊಕೋವಿಕ್ ಒಟ್ಟು ಐದು ಬಾರಿ ಚಾಂಪಿಯನ್ ಎನಿಸಿದ್ದಾರೆ.