ಡಿ.ಜೆ ಹಳ್ಳಿ, ಕೆ.ಜಿಹಳ್ಳಿ ಗಲಭೆ ಪ್ರಕರಣ: ಕಾರ್ಪೋರೇಟರ್ ಸಂಪತ್ ರಾಜ್ ಅವರ ಪಿಎ ಬಂಧನ…

Promotion

ಬೆಂಗಳೂರು,ಆ,18,2020(www.justkannada.in):  ಬೆಂಗಳೂರಿನ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೋರೇಟರ್ ಸಂಪತ್ ರಾಜ್ ಅವರ ಪಿಎ ಅರುಣ್ ಎಂಬುವವರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.jk-logo-justkannada-logo

ಗಲಭೆ ಪ್ರಕರಣದ ಆರೋಪಿಗಳ ಜತೆ  ಕಾರ್ಪೋರೇಟರ್ ಸಂಪತ್ ರಾಜ್ ಅವರ ಪಿಎ ಅರುಣ್ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು ಈ ಹಿನ್ನೆಲೆ ಸಿಸಿಬಿ ಪೊಲೀಸರು ಅರುಣ್ ನನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟೀಸ್  ನೀಡಿದ್ದ ಹಿನ್ನೆಲೆ ಇಂದು ಇಬ್ಬರು ಕಾರ್ಪೋರೇಟರ್ ಗಳಾದ ಸಂಪತ್ ರಾಜ್ ಮತ್ತು ಜಾಕೀರ್ ವಿಚಾರಣೆಗೆ ಹಾಜರಾಗಿದ್ದಾರೆ.dj-halli-kg-halli-riot-case-arrest-corporator-sampath-raj-pa

ಸಿಸಿಬಿ ಕಚೇರಿಯಲ್ಲಿ ಇಬ್ಬರು ಕಾರ್ಪೋರೇಟರ್ ಗಳನ್ನ ಪ್ರತ್ಯೇಕವಾಗಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಅರುಣ್ ಸಂಪತ್ ರಾಜ್ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ.

Key words: DJ halli- Kg halli- riot case-arrest – Corporator- Sampath Raj- PA