ತ್ರಿಚಕ್ರ ವಾಹನಗಳ ವಿತರಣೆ: ಮೈಸೂರಿನಲ್ಲಿ ಸ್ವಾವಲಂಬಿ ಜೀವನಕ್ಕೆ ಕಾಲಿಟ್ಟ ಮಹಿಳೆಯರು…

ಮೈಸೂರು,ಮಾರ್ಚ್,5,2021(www.justkannada.in):  ಇತ್ತೀಚೆಗೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪಾಲ್ಗೊಂಡು ಸಾಧನೆ ಮಾಡುತ್ತಿದ್ದಾರೆ. ಶಿಕ್ಷಣ, ರಾಜಕೀಯ, ಕಲೆ, ಸಾಹಿತ್ಯ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಂಡು ಸಾಧನೆ ಮಾಡಿರುವ ಎಷ್ಟೋ ಉದಹಾರಣೆಗಳು ನಮ್ಮ ಕಣ್ಣ ಮುಂದಿದೆ.distribution-three-wheelers-women-entered-self-reliance-mysore

ಈ ಮಧ್ಯೆ ಮೈಸೂರಿನಲ್ಲಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಕಾಲಿಡುವ ಮೂಲಕ ಮುನ್ನುಡಿ ಬರೆದಿದ್ದಾರೆ. ಪ್ಯಾಸೆಂಜರ್ ಆಟೋ ಓಡ್ಸೋಕು ಸೈ ಗೂಡ್ಸ್ ಆಟೋ ಓಡ್ಸೋಕು ಸೈ ಎನ್ನುತ್ತಿರುವ  ಸ್ವಾಭಿಮಾನಿ ಮಹಿಳೆಯರು ಆಟೋ ಓಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇಂದು ಜನಯತ್ರಿ ಯೋಜನೆಯಡಿ ಸ್ವಾಭಿಮಾನಿ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಯುವ ಚಿಂತನ ಫೌಂಡೇಷನ್ ವತಿಯಿಂದ ತ್ರಿಚಕ್ರ ವಾಹನಗಳ ವಿತರಣೆ ಮಾಡಲಾಯಿತು.  ಪ್ರಾದೇಶಿಕ ಆಯುಕ್ತರ ಕಛೇರಿ ಆವರಣದಲ್ಲಿ ಫಲಾನುಭವಿ ಸ್ವಾವಲಂಬಿ ಮಹಿಳೆಯರಿಗೆ ತ್ರಿಚಕ್ರ ವಾಹನಗಳ ಕೀಲಿ ಕೈ ಹಸ್ತಾಂತರ ಮಾಡಲಾಯಿತು.distribution-three-wheelers-women-entered-self-reliance-mysore

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತ ಡಾ. ಸಿ. ಜಿ. ಪ್ರಕಾಶ್, ಬಿಜೆಪಿ ಮುಖಂಡ ನೆ. ಲ. ನರೇಂದ್ರ ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮ, ಯುವ ಚಿಂತನ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಅನುಪಮಾ ಗೌಡ, ಬಜಾಜ್ ಕಂಪನಿ ರೀಜನಲ್ ಮ್ಯಾನೇಜರ್ ಇಂದ್ರಜಿತ್ ಸೇರಿದಂತೆ ಮಹಿಳಾ ಫಲಾನುಭವಿಗಳು ಭಾಗಿಯಾಗಿದ್ದರು.

Key words: Distribution – three wheelers-Women -entered -self-reliance -Mysore.