ದೇಶಾದ್ಯಂತ ಕೋವಿಡ್ ವ್ಯಾಕ್ಸಿನ್ ಹಂಚುತ್ತೇವೆ- ಭಾರತೀಯ ವಿಜ್ಞಾನಿಗಳ ಶ್ರಮ ಶ್ಲಾಘಿಸಿದ ಪ್ರಧಾನಿ ಮೋದಿ…

kannada t-shirts

ನವದೆಹಲಿ,ಜನವರಿ,4,2021(www.justkannada.in):  ಭಾರತೀಯ ವೈದ್ಯರ ಜಗತ್ತಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ನಮ್ಮ ದೇಶದ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ. ಆತ್ಮ ನಿರ್ಭರ ಯೋಜನೆಯಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.jk-logo-justkannada-mysore

ಇಂದು  ಮಾತನಾಡಿದ ಪ್ರಧಾನಿ ಮೋದಿ ವಿಜ್ಞಾನ ಕ್ಷೇತ್ರದಲ್ಲಿ ಭಾರತ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಹೊಸ ವರ್ಷ ಹಲವು ಅವಕಾಶವನ್ನ ಹೊತ್ತು ತಂದಿದೆ. ಭಾರತದ ಎದರು ಈಗ ಹೊಸ ಗುರಿ ಹೊಸ ಸವಾಲು ಇದೆ.  ಎರಡು ಕೋವಿಡ್ ಲಸಿಕೆ ತಯಾರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಭಾರತೀಯ ವಿಜ್ಞಾನಿಗಳ ಶ್ರಮ ಶ್ಲಾಘನೀಯ ಎಂದರು.

ಭಾರತದಲ್ಲೇ ಅತಿಹೆಚ್ಚು ಕೊರೋನಾ ವ್ಯಾಕ್ಸಿನ್ ಉತ್ಪಾದನೆಯಾಗುತ್ತಿದೆ. ಜಗತ್ತಿನಲ್ಲೇ ಅತಿ ದೊಡ್ಡ ಪ್ರಮಾಣದ ಲಸಿಕೆ ಹಂಚಿಕೆ ಪ್ರಕ್ರಿಯೆ ದೇಶದಲ್ಲಿ ನಡೆಯಲಿದೆ. ವಿಜ್ಞಾನದಿಂದ ಭಾರತ ಅಭಿವೃದ್ಧಿಯಾಗುತ್ತಿದೆ.  ಇಡೀ ಜಗತ್ತಿಗೆ ಮಾದರಿ ದೇಶವಾಗುತ್ತಿದೆ. ದೇಶಾದ್ಯಂತ ಜನವರಿಗೆ ಕೊರೊನಾ ಲಸಿಕೆ ನೀಡಲಾಗುವುದು. ಭಾರತ ಮುಂದಿನ ದಿನಗಳಲ್ಲಿ ವಿದೇಶಗಳಿಗೆ ವ್ಯಾಕ್ಸಿನ್ ರಪ್ತು ಮಾಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.distribute-covid-vaccine-nationwide-pm-modi-praised-hard-work-indian-scientists

ಇದುವರೆಗೆ ಭಾರತ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಇದೀಗ ಭಾರತದ ಮೇಲೆ ಹಲವು ದೇಶಗಳು ಅವಲಂಬಿತವಾಗಿವೆ. ಹೊವ ವರ್ಷ ಹಲವು ಅವಕಾಶಗಳನ್ನು ಹೊತ್ತು ತಂದಿದೆ. ಭಾರತದ ಎದರು ಹೊಸ ಗುರಿ, ಹೊಸ ಸವಾಲುಗಳಿವೆ. ಈಗ ಕಾಲ ಬದಲಾಗಿದೆ. ಆಮದು ಕಡಿಮೆಯಾಗಿದೆ. ರಪ್ತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು.

Key words: distribute -covid vaccine- nationwide- PM Modi -praised – hard work – Indian- scientists.

website developers in mysore