ನಾಳೆ ಸಂಜೆಯೊಳಗೆ ಕ್ರಮಬದ್ಧವಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರು ನಿರ್ಧಾರ…

Promotion

ಮುಂಬೈ,ಜು,9,2019(www.justkannada.in): 13ಮಂದಿ ಅತೃಪ್ತ ಶಾಸಕರ  ಪೈಕಿ 8 ಮಂದಿ ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲವೆಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ಹಿನ್ನೆಲೆ ಅತೃಪ್ತ ಶಾಸಕರು ಮತ್ತೊಮ್ಮೆ ನಾಳೆ ಸಂಜೆಯೊಳಗೆ ರಾಜೀನಾಮೆ ಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು 13 ಮಂದಿ ಶಾಸಕರ ರಾಜೀನಾಮೆ ಪತ್ರ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸ್ಪೀಕರ್ ರಮೇಶ್ ಕುಮಾರ್, ಈ 13 ರಾಜೀನಾಮೆ ಪತ್ರಗಳಲ್ಲಿ 5 ರಾಜೀನಾಮೆ ಪತ್ರಗಳನ್ನು ಹೊರತುಪಡಿಸಿ, ಅಂದರೇ ಆನಂದ್ ಸಿಂಗ್, ನಾರಾಯಣಗೌಡ, ಪ್ರತಾಪ್ ಗೌಡ ಪಾಟೀಲ್, ಗೋಪಾಲಯ್ಯ, ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯಷ್ಟೇ ಕ್ರಮ ಬದ್ಧವಾಗಿದೆ. 8ಮಂದಿ ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಸ್ಪೀಕರ್ ಸ್ಪಷ್ಟನೆ ಹಿನ್ನೆಲೆ 8 ಮಂದಿ ಅತೃಪ್ತ ಶಾಸಕರು ನಾಳೆ ಸಂಜೆಯೊಳಗೆ ಮತ್ತೊಮ್ಮೆ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಅಧಿವೇಶನಕ್ಕೂ ಮುನ್ನವೇ ಕ್ರಮಬದ್ಧವಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Key words: Dissatisfied- MLAs-decide – resign- orderly- tomorrow