ಹೆಚ್ ಡಿ ಕುಮಾರಸ್ವಾಮಿ 13 ತಿಂಗಳಿಗೆ ಮಾತ್ರ ಅದೃಷ್ಟದ ಮುಖ್ಯಮಂತ್ರಿ- ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯ..

ಬೆಂಗಳೂರು,ಜು,9,2019(www.justkannada.in):  ಕುಮಾರಸ್ವಾಮಿ ಹದಿಮೂರು ತಿಂಗಳಿಗೆ ಮಾತ್ರ ಅದೃಷ್ಟದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿಟಿ ರವಿ, ಕುಮಾರಸ್ವಾಮಿ‌ ಅವರು ಕೂಡ ನಾನು ಸಾಂಧರ್ಬಿಕ ಶಿಶು ಅಂದಿದ್ದರು. ಅವರು  ಅದೃಷ್ಟದಿಂದ ಸಿಎಂ‌ ಆಗಿದ್ರು.13 ತಿಂಗಳುಗಳಿಗೆ ಮಾತ್ರ ಅವರ ಅದೃಷ್ಣ ಇತ್ತು. ಅವರ ಅದೃಷ್ಟದ ಕೋಟಾ ಮುಗಿದಿದೆ ಎಂದು ಹೇಳಿದರು.

ಅವರ ದೌರ್ಬಲ್ಯ ಇವತ್ತು ಈ ಸ್ಥಿತಿಗೆ ತಂದಿದೆ. ಈ ಸರ್ಕಾರ ಜನರ ವಿಶ್ವಾಸದಿಂದ ಬಂದ ಸರ್ಕಾರ ಅಲ್ಲ.  ಚುನಾವಣಾ ಪೂರ್ವ ಮೈತ್ರಿ ಆಗಿರಲಿಲ್ಲ. ಅವತ್ತು ಜೆಡಿಎಸ್ ನ್ನು ಬಿಜೆಪಿಯ ಬಿ ಟೀಂ‌ ಎಂದ್ರಿದ್ರು ರಾಹುಲ್ ಗಾಂಧಿ. ದೇವೆಗೌಡ್ರು ಕೂಡ ಸಿದ್ದರಾಮಯ್ಯ ಬಗ್ಗೆ ಇಂಥ ನೀಚ ರಾಜಕಾರಣಿ  ನೋಡಿಲ್ಲಾ ಎಂದ್ರಿದ್ರು. ನಾವು ಎಲ್ಲವನ್ನೂ ಕಾದು ನೋಡ್ತಾ ಇದೀವಿ. ಬಿಜೆಪಿ ಪಾರ್ಲಮೆಂಟರಿ ತಗೋಳೊ ನಿರ್ಧಾರದ  ಮೇಲೆ‌ ನಮ್ಮ‌ ಮುಂದಿನ‌ ನಡೆ ಇರುತ್ತದೆ. ಅಲ್ಲಿವರೆಗೂ ನಾವು ಕಾದು‌ ನೋಡ್ತಿವಿ ಎಂದು  ತಿಳಿಸಿದರು.

Key words: HD Kumaraswamy – lucky chief minister – only- 13 months-ct ravi