ದಿಶಾ ಗ್ಯಾಂಗ್ ರೇಪ್ ಆರೋಪಿಗಳ ಎನ್ ಕೌಂಟರ್ ಕೇಸ್: ತನಿಖೆಗೆ  ಮೂವರು ಸದಸ್ಯರ ಸಮಿತಿ ರಚಿಸಿದ ಸುಪ್ರೀಂಕೋರ್ಟ್…

ನವದೆಹಲಿ,ಡಿ,12,2019(www.justkannada.in):  ಹೈದರಾಬಾದ್‌ ನಲ್ಲಿ ಪಶು ವೈದ್ಯೆಯ ಮೇಲೆ ಅತ್ಯಾಚಾರ  ಕೊಲೆ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸುಪ್ರೀಂಕೋರ್ಟ್  ಮೂವರು ಸದಸ್ಯರ ಸಮಿತಿಯನ್ನ  ರಚಿಸಿದೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ವಿಎಸ್ ಸಿರ್ ಪುರ್ಕರ್ ಅವರ ಅಧ್ಯಕ್ಷತೆಯಲ್ಲಿ  ತನಿಖಾ ಸಮಿತಿಯ ರಚಿಸಲಾಗಿದೆ. ಸಮಿತಿಯಲ್ಲಿ ನಿವೃತ್ತ ನ್ಯಾ. ರೇಖಾ ಬಲ್ಡೋಟಾ ಸಿಬಿಐ ನಿವೃತ್ತ ನಿರ್ದೇಶಕರಾದ ಕಾರ್ತಿಕೇಯನ್ ಅವರು ಸದಸ್ಯರಾಗಿದ್ದಾರೆ. ಹಾಗೆಯೇ  ಪ್ರಕರಣದ ಇತರೆ ತನಿಖೆಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ,

ಆರು ತಿಂಗಳೊಳಗೆ ತನ್ನ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಮೂವರ ಸಮಿತಿಗೆ ಸುಪ್ರೀಂಕೋರ್ಟ್  ಸೂಚನೆ ನೀಡಿದೆ. ಜತೆಗೆ  ಸಮಿತಿ ಸದಸ್ಯರಿಗೆ ಸಿಆರ್ ಪಿಎಫ್ ಭದ್ರತೆ ಕೊಡಬೇಕು. ಸರ್ಕಾರವೇ ಸಮಿತಿ ಸದಸ್ಯರ ವೆಚ್ಚ ಭರಿಸಬೇಕು ಎಂದು ತೆಲಂಗಾಣ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

Key words: Disha- gang rape- accused-counter case- Supreme Court- three-member- committee -nvestigate.