ದೀಪಾವಳಿ: ಬಿಜೆಪಿ ನಾಯಕರಿಂದ ಗೋಪೂಜೆ ಮೂಲಕ ಬಲಿಪಾಡ್ಯಮಿ ಆಚರಣೆ.

ಬೆಂಗಳೂರು, ಅಕ್ಟೋಬರ್ 27, 2022 (www.justkannada.in): ಕರ್ನಾಟಕದ ಬಿಜೆಪಿ ನಾಯಕರು ದೀಪಾವಳಿ ಹಬ್ಬದ ನಾಲ್ಕನೇ ದಿನ ಅಂದರೆ ಬಲಿಪಾಡ್ಯಮಿಯನ್ನು ಅವರವರ ಮನೆಗಳಲ್ಲಿ ಬುಧವಾರದಂದು ಗೋಪೂಜೆ ನಡೆಸುವ ಮೂಲಕ ಆಚರಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗೋಪೂಜೆ ಮಾಡಿದರು.

ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿರುವ ತಮ್ಮ ಮನೆಯಲ್ಲಿ ಎರಡು ಗಿರ್ ತಳಿಯ ಹಸುಗಳನ್ನು ಪಾಲನೆ ಮಾಡುತ್ತಿದ್ದಾರೆ. ಈ ಗೋವುಗಳನ್ನು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಡುಗೊರೆಯಾಗಿ ಪಡೆದಿದ್ದು, ಅಂದಿನಿಂದಲೂ ಅವರು ತಮ್ಮ ಮನೆಯಲ್ಲಿರುವ ಕರುವಿನ ಜೊತೆಗೆ ಪ್ರತಿ ದಿನ ಸ್ವಲ್ಪ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಯಡಿಯೂರಪ್ಪ ಅವರು ಈ ಗೋವುಗಳಿಗೆ ಕಾಳುಗಳನ್ನು ನೀಡಿ, ಪೂಜೆ ಮಾಡುವ ಮೂಲಕ ದೀಪಾವಳಿ ಆಚರಿಸಿದರು.

ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶಿವಮೊಗ್ಗ ಜಿಲ್ಲೆಯಲ್ಲಿರುವ ಗುಡ್ಡೆಕೊಪ್ಪ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಹಸುಗಳಿಗೆ ಪೂಜೆ ಸಲ್ಲಿಸಿದರು. ಗೋವುಗಳಿಗೆ ಆರತಿ ಎತ್ತಿ ಅಕ್ಕಿ ತಿನ್ನಿಸುವ ಮೂಲಕ ಹಬ್ಬ ಆಚರಣೆ ಮಾಡಿದರು.

ಹಿಂದೂ ಪದ್ಧತಿಯ ಪ್ರಕಾರ, ಬಲಿಪಾಡ್ಯಮಿ ಭೂಮಿಗೆ ಮಹಾಬಲಿಯ ಮರಳಿಕೆಯನ್ನು ಹಾಗೂ ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ವಾಮನನ ವಿಜಯವನ್ನು ಸೂಚಿಸುತ್ತದೆ. ಈ ಹಬ್ಬ ಮಹಾಬಲಿ ಹಾಗೂ ತ್ರಿವಿಕ್ರಮನ ಅವತಾರದ ಮೂಲಕ ಎಲ್ಲಾ ರಾಕ್ಷಸರ ವಿರುದ್ಧ ವಿಷ್ಣುವಿನ ವಿಜಯವನ್ನು ಸೂಚಿಸುತ್ತದೆ. ತನ್ನ ಸೋಲಿನ ಸಮಯದಲ್ಲಿ ಬಲಿ ಚಕ್ರವರ್ತಿ ವಿಷ್ಣುವಿನ ಭಕ್ತನಾಗಿದ್ದ ಮತ್ತು ಶಾಂತಿಯುತ, ಪ್ರಗತಿಪರ ಸಾಮ್ರಾಜ್ಯದ ರಾಜನಾಗಿದ್ದ. ಮಹಾಬಲಿಯ ವಿರುದ್ಧ ಮಹಾವಿಷ್ಣುವಿನ ವಿಜಯ ಯುದ್ಧದಲ್ಲಿ ಅಂತ್ಯಗೊಂಡಿತು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Dipavali- Balipadyami -celebration -Gopuja -BJP leaders.