ದಿಗ್ಬಂಧನ ಕಳೆ ಬಾಧಿತ ಪ್ರದೇಶದಿಂದ ಬೇರೆಡೆಗೆ ಪ್ರಸರಣಕ್ಕೆ ಕೃಷಿ ಇಲಾಖೆಯಿಂದ ತಡೆ- ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ…

kannada t-shirts

ಬೆಂಗಳೂರು, ಮಾ 17,2020(www.justkannada.in):  ದೇಶದಲ್ಲಿಯೇ ಮೊದಲ ಬಾರಿಗೆ ಕಂಡುಬಂದ ಹೊಸ ದಿಗ್ಬಂಧನ ಕಳೆ-ಕಾಡುದವನ (ಅಂಬ್ರೋಸಿಯಾ ಸೈಲೋಸ್ಟಾಕಿಯಾ) ಸೂರ್ಯಕಾಂತಿ ಜಾತಿಯ ಬಹುವಾರ್ಷಿಕ ಬೆಳೆಯಾದ ವಿದೇಶಿ ಕಳೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಬಾಧಿತ ಹೊರವರ್ತುಲ ಪ್ರದೇಶದಿಂದ ಕಳೆಗಳ ನಿಯಂತ್ರಣ ಕಾರ್ಯಕೈಗೊಂಡಿದ್ದರಿಂದ ಕಳೆಯು ಬಾಧಿತ ಪ್ರದೇಶದಿಂದ ಬೇರೆಡೆಗೆ ಪ್ರಸರಣಗೊಳ್ಳುವುದನ್ನು ತಡೆಯಲಾಗಿರುತ್ತದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಭೌತಿಕ,ರಾಸಾಯನಿಕ ಹಾಗೂ ಜೈವಿಕ ವಿಧಾನಗಳನ್ನು ಅನುಸರಿಸಿ ಸಮಗ್ರ ಕಳೆ ನಿರ್ವಹಣಾ ಪದ್ಧತಿಗಳ ಮೂಲಕ ಸಾಮೂಹಿಕ ಕಳೆ ನಿರ್ವಹಣಾ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೇಂದ್ರೀಯ ಸಮಗ್ರಹ ಪೀಡೆ ನಿರ್ವಹಣಾ ಕೇಂದ್ರ ಬೆಂಗಳೂರು ಹಾಗೂ ಸ್ಥಳೀಯ ರೈತರ ಸಹಯೋಗದೊಂದಿಗೆ ಕಳೆ ನಿರ್ವಹಣಾ ಕಾರ್ಯ ಪ್ರಗತಿಯಲ್ಲಿದೆ. 2013-14 ನೇ ಸಾಲಿನಲ್ಲಿಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ 12.10 ಲಕ್ಷ ರೂ. ಅನುದಾನವನ್ನು ಒದಗಿಸಿ ವಿಜ್ಞಾನಿಗಳ ನೇತೃತ್ವದಲ್ಲಿ 2017ರವರೆಗೆ ಅಗತ್ಯ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಮುಂಗಾರಿನ ರಾಗಿ ಬೆಳೆಯುವ ಪ್ರದೇಶದಲ್ಲಿ 2-4,ಡಿ ಸೋಡಿಯಂ ಲವಣಾಂಶವುಳ್ಳ ಕಳೆನಾಶಕವನ್ನು ಹಾಗೂ ಬೆಳೆಯಿಲ್ಲದ ಖಾಲಿ ಜಾಗದಲ್ಲಿ, ಅರಣ್ಯ ಪ್ರದೇಶ ಹಾಗೂ ಬಂಜರು ಪ್ರದೇಶದಲ್ಲಿ ಗ್ರೈಪೋಸೇಟ್ ಕಳೆನಾಶಕವನ್ನು ಬಳಸಿ ನಿಯಂತ್ರಣ ಕೈಗೊಳ್ಳಲಾಗಿರುತ್ತದೆ. ಬಾಧಿತ ಪ್ರದೇಶದ ರೈತರಿಗೆ ರಿಯಾಯಿತಿ ಹಾಗೂ ಉಚಿತವಾಗಿ ಕಳೆನಾಶಕಗಳನ್ನು ಹಾಗೂ ಸಿಂಪರಣಾ ವೆಚ್ಚವನ್ನು ನಿಯಂತ್ರಣಾ ಯೋಜನೆ ಮೂಲಕ ನೀಡಲಾಗಿರುತ್ತದೆ ಎಂದಿದ್ದಾರೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದವರು ಕಳೆಯ ಸಂಪೂರ್ಣ ನಿರ್ಮೂಲನೆಗೆ ಕಳೆನಾಶಕ ಬಳಕೆಯ ಜೊತೆಗೆ ಇತರೆ ಸಂಭವನೀಯ ಪದ್ಧತಿಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ಮತ್ತು ನಿರ್ಮೂಲನ ಕಾರ್ಯ ಚಟುವಟಿಕೆಗಳಿಗೆ ಮೂರು ವರ್ಷಗಳಿಗೆ 23.07 ಲಕ್ಷ ರೂ.ಗಳಿಗೆ ಅನುದಾನದ ಬೇಡಿಕೆ ಸಲ್ಲಿಸಿದ್ದು, ಬೇಡಿಕನುಗುಣವಾಗಿ ಸರ್ಕಾರ ಈಗಾಗಲೇ 7.69 ಲಕ್ಷ ರೂ.ಗಳನ್ನು ಈಗಾಗಲೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಬಿಡುಗಡೆಗೊಳಿಸಿದೆ. ಕಾಡುದವನ ದಿಗ್ಭಂದನಾ ಕಳೆಯಾಗಿರುವುದರಿಂದ ಕೇಂದ್ರ ಸರ್ಕಾರದಿಂದಲೂ ಸಹ ಕಳೆಯ ಸಂಪೂರ್ಣ ನಿರ್ಮೂಲನೆಗೆ ಬೆಂಗಳೂರಿನ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರ ಕ್ಕೆ ಮೂರು ವರ್ಷಗಳಿಗೆ 35.1348 ಲಕ್ಷ ರೂ ರೂ.ಗಳ  ಅನುದಾನವನ್ನು ಒದಗಿಸಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Key words: Department -Agriculture -dissemination – weed infestation-Agriculture Minister- BC Patil.

 

website developers in mysore