ಕೊರೋನಾ ಶಂಕೆ ಹಿನ್ನೆಲೆ: ಆಸ್ಪತ್ರೆಗೆ  ದಾಖಲಾಗಿದ್ದ ವ್ಯಕ್ತಿ ಪರಾರಿ….

ಬೆಂಗಳೂರು,ಮಾ,17,2020(www.justkannada.in):  ಕೊರೋನಾ ಮಹಾಮಾರಿ ಭೀತಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಈ ನಡುವೆ ಕೊರೋನಾ ಶಂಕೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೊರೋನಾ ಶಂಕೆ ಹಿನ್ನೆಲೆ ಇತ್ತೀಚೆಗೆ ಅಮೆರಿಕಾದಿಂದ ಹಿಂತಿರುಗಿದ್ದ ವ್ಯಕ್ತಿಗೆ ಬೆಂಗಳೂರಿನ ಸಿ.ವಿ ರಾಮನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವ್ಯಕ್ತಿಗೆ ಕೊರೊನಾ ಸೋಂಕಿನ ಶಂಕೆಯ ಹಿನ್ನಲೆಯಲ್ಲಿ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದ್ರೇ ಲ್ಯಾಬ್ ವರದಿ ಬರುವುದಕ್ಕೂ ಮುಂಚೆಯೇ ಕೊರೊನಾ ಶಂಕಿತ ವ್ಯಕ್ತಿ ಪರಾರಿಯಾಗಿದ್ದಾನೆ.

ಲ್ಯಾಬ್ ರಿಪೋರ್ಟ್ ವೈದ್ಯರಿಗೆ ತಲುಪುವ ಮೊದಲೇ ಕೊರೋನಾ ಶಂಕಿತ  ವ್ಯಕ್ತಿ ಆಸ್ಪತ್ರೆಯಿಂದ ಪರಾರಿಯಾಗಿದ್ದು ಎಸ್ಕೇಫ್ ಆಗಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.  ವ್ಯಕ್ತಿ ಪರಾರಿ ಹಿನ್ನೆಲೆ ಜನರಲ್ಲಿ ಆತಂಕವನ್ನು ಮೂಡಿಸಿದೆ. ವಿದೇಶದಿಂದ ಬರುವವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು ಕೊರೋನಾ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನ ಪ್ರತ್ಯೇಗವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

Key words: Corona virus- hospitalized- man -escape