ರೈತರ ಬೇಡಿಕೆ ಈಡೇರಿಸದಿದ್ದರೆ, ಉಪವಾಸ ಕುಳಿತುಕೊಳ್ಳುತ್ತೇನೆ : ಅಣ್ಣಾ ಹಜಾರೆ ಎಚ್ಚರಿಕೆ…!

ಪುಣೆ,ಡಿಸೆಂಬರ್,28,2020(www.justkannada.in) : ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳ ಕಾಲಾವಕಾಶ ಕೇಳಿದೆ. ಹಿಗಾಗಿ, ಜನವರಿ ಅಂತ್ಯದವರೆಗೆ ನೋಡುತ್ತೇನೆ. ಇಲ್ಲದಿದ್ದರೆ ಉಪವಾಸಕ್ಕೆ ಕುಳಿತುಕೊಳ್ಳುತ್ತೇನೆ. ಇದು ನನ್ನ ಜೀವನದ ಕೊನೆಯ ಉಪವಾಸ ಆಗಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಎಚ್ಚರಿಸಿದ್ದಾರೆ.

ಸರ್ಕಾರದ ಮೇಲೆ ನಂಬಿಕೆ ಹೋರಟುಹೋಗಿದೆ

ತಾವು ಕಳೆದ ಮೂರು ವರ್ಷಗಳಿಂದ ರೈತರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದೇನೆ. ಆದರೆ, ಇದುವೆಗೆ ಸರ್ಕಾರ ನನ್ನ ಮನವಿಗೆ ಸ್ಪಂದಿಸಿಲ್ಲ. ನೀಡಿದ ಭರವಸೆಗಳನ್ನಷ್ಟೇ ನೀಡುತ್ತಿರುವ ಸರ್ಕಾರದ ಬಗ್ಗೆ ತನಗೆ ನಂಬಿಕೆ ಸಂಪೂರ್ಣ ಹೊರಟು ಹೋಗಿದೆ. ಇದೀಗ ರೈತರು ಬೀದಿಗಿಳಿದಿದ್ದಾರೆ. ಇನ್ನು ಒಂದೇ ತಿಂಗಳು ಗಡುವು ಇರುವುದು ಎಂದಿದ್ದಾರೆ.

ಎಂಎಸ್ ಸ್ವಾಮಿನಾಥನ್ ಸಮಿತಿ ವರದಿಯ ಶಿಫಾರಸುಗಳನ್ನ ಜಾರಿಗೆ ತರಬೇಕು. ಕೃಷಿ ವೆಚ್ಚ ಮತ್ತು ದರ ಆಯೋಗ (ಸಿಎಸಿಪಿ) ಸಂಸ್ಥೆಗೆ ಸ್ವಾಯತ್ತ ಅಧಿಕಾರ ನೀಡಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆಗಳು. ಈ ನಿಟ್ಟಿನಲ್ಲಿ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಡಿಸೆಂಬರ್ 14ರಂದು ಪತ್ರ ಬರೆದಿದ್ದು, ಈ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿದ್ದಾರೆ.demand-farmers-not-met-Fasting-Sit down-Anna Hazare-warns ಸರ್ಕಾರ ಕೇವಲ ಖಾಲಿ ಭರವಸೆಗಳನ್ನಷ್ಟೇ ನೀಡುತ್ತಿದೆ. ಆದ್ದರಿಂದ, ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದೇನೆ. ಈಗ ನನ್ನ ಬೇಡಿಕೆಗಳ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ನೋಡೋಣ ಎಂದು ತಿಳಿಸಿದ್ದಾರೆ.

key words : demand-farmers-not-met-Fasting-Sit down-Anna Hazare-warns