3ಕೋಟಿ ಡೋಸ್ ಲಸಿಕೆಗೆ ಬೇಡಿಕೆ ಇಟ್ಟಿದ್ದೇವೆ: ಈಗ ಹೊಸದಾಗಿ ಯಾರಿಗೂ ವ್ಯಾಕ್ಸಿನ್ ಹಾಕುತ್ತಿಲ್ಲ- ಸಿಎಸ್ ರವಿಕುಮಾರ್..

ಬೆಂಗಳೂರು,ಮೇ,12,2021(www.justkannada.in): ರಾಜ್ಯಕ್ಕೆ 6 ಕೋಟಿ ಡೋಸ್ ಲಸಿಕೆ ಬೇಕು. ಈಗಾಗಿ  ಸದ್ಯಕ್ಕೆ 3 ಕೋಟಿ ಡೋಸ್ ಲಸಿಕೆಗೆ ಕೇಂದ್ರದ ಬಳಿ ಬೇಡಿಕೆ ಇಟ್ಟಿದ್ದೇವೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.jk

ಮಾಧ್ಯಮಗಳ ಜತೆ ಮಾತನಾಡಿ ಮಾಹಿತಿ ನೀಡಿದ ಸಿಎಸ್ ರವಿ ಕುಮಾರ್, ನಮ್ಮಲ್ಲಿ ಲಸಿಕೆ ಇದ್ದಿದ್ದರೇ ಹಾಕುತ್ತಿದ್ದವು. ಏಪ್ರಿಲ್ 2ನೇ ವಾರದಲ್ಲಿ ಲಸಿಕೆಗೆ ಆರ್ಡರ್ ಮಾಡಿದ್ದವು. ಮೇ 1ರಿಂದ ನಮಗೆ ಲಸಿಕೆ ಪೂರೈಕೆ ಮಾಡಿದ್ದಾರೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪೂರೈಕೆ ಮಾಡುತ್ತಿದ್ದಾರೆ. ಪ್ರತಿ 15 ದಿನಕ್ಕೆ 15 ಲಕ್ಷ ಡೋಸ್ ಲಸಿಕೆ ಪೂರೈಸುತ್ತಿದ್ದಾರೆ. ಈಗ ಹೊಸದಾಗಿ ಯಾರಿಗೂ ಲಸಿಕೆ ಹಾಕುತ್ತಿಲ್ಲ. 2ನೇ ಡೋಸ್ ಮಾತ್ರ ಕೊಡ್ತಿದ್ದೇವೆ. ಕರ್ನಾಟಕದಲ್ಲಿ ಮಾತ್ರ ಇಂತಹ ಸಮಸ್ಯೆ ಇಲ್ಲ. ಎಲ್ಲಾ ರಾಜ್ಯಗಳಲ್ಲೂ ಇಂತಹ ಸಮಸ್ಯೆ ಇದೆ ಎಂದು ತಿಳಿಸಿದರು.demanded-3-crore-dose-vaccine-cs-ravikumar

ರಾಜ್ಯಕ್ಕೆ 6 ಕೋಟಿ ಡೋಸ್ ಲಸಿಕೆ ಅಗತ್ಯವಿದ್ದು ಸದ್ಯ 3 ಕೋಟಿ ಡೋಸ್ ಗೆ ಬೇಡಿಕೆ ಇಟ್ಟಿದ್ದೇವೆ. ಲಸಿಕೆ ನೀಡಲು ನಮಗೆ ಸಮಯ ಬೇಕಿದೆ. ಬೇರೆ ದೇಶದಲ್ಲಿ ಉತ್ಪಾದಿಸುವ ಲಸಿಕೆ ಆಮದಿಗೂ ಮನವಿ ಮಾಡಿದ್ದೇವೆ. ನಮಗೆ ಲಸಿಕೆ ಬಂದಂತೆ ಜನರಿಗೆ ಕೊಡುತ್ತೇವೆ ಎಂದು ಸಿಎಸ್ ರವಿ ಕುಮಾರ್ ತಿಳಿಸಿದರು.

ENGLISH SUMMARY….

“We have demanded to provide us 3 crore doses of vaccine; We are not providing vaccine for new registrations: CS Ravi Kumar
Bengaluru, May 12, 2021 (www.justkannada.in): “Our state requires 6 crore doses of vaccination. We have demanded the Union Government to provide us three crores now,” said Ravikumar, Chief Secretary to the Government.demanded-3-crore-dose-vaccine-cs-ravikumar
Speaking to the press persons today he informed that the government has not received the vaccine which was ordered in the 2nd week of April. “We are receiving vaccines from May 1 and we are providing it to people above 45 years of age. We are providing 15 lakh doses of vaccine every day. However, we are not giving it to new registrations. As of now, only 2nd dose is being given. It is not only Karnataka that is facing this crisis, but all other states are also facing this problem,” he explained.
Keywords: Chief Secretary to the Government/ Ravikumar/ State Govt./ 3 crore doses/ vaccination

Key words: demanded- 3 crore dose –vaccine-CS- Ravikumar.