ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಆಗ್ರಹ: ಪ್ರಧಾನಿ ಮೋದಿಗೆ ಹೆಚ್.ಡಿ ದೇವೇಗೌಡರಿಂದ ಪತ್ರ.

Promotion

ಬೆಂಗಳೂರು,ಜನವರಿ,24,2023(www.justkannada.in):  ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದಿದ್ದಾರೆ.

ಈ ಕುರಿತು ಮೋದಿಗೆ ಪತ್ರ ಬರದಿರುವ ಹೆಚ್.ಡಿ ದೇವೇಗೌಡರು,  ಭಧ್ರಾವತಿಯ ವಿಐಎಸ್ ಎಲ್ ಕಾರ್ಖಾನೆ ಮುಚ್ಚಬಾರದು. ಕಾರ್ಖಾನೆಯನ್ನ ಮರು ಆರಂಭ ಮಾಡಲು  ಕ್ರಮ ಕೈಗೊಳ್ಳಬೇಕು. ಇದರಿಂದ 20 ಸಾವಿರ ಕುಟುಂಬ ಅವಲಂಭಿತರಾಗಿದ್ದು,  ರಕ್ಷಣಾ ವಲಯ ನ್ಯೂಕ್ಲಿಯರ್, ರೈಲ್ವೆ ಮುಂತಾದ ವಿಭಾಗಕ್ಕೆ ಕಾರ್ಖಾನೆಯಿಂದ ಅನುಕೂಲವಾಗಲಿದೆ.

ಈ ಹಿನ್ನೆಲೆಯಲ್ಲಿ ವಿಐಎಸ್ ಎಲ್ ಕಾರ್ಖಾನೆ  ಮುಚ್ಚುವ ನಿರ್ಧಾರವನ್ನು ಕೈ ಬಿಡಬೇಕು ಎಂದು ಹೆಚ್.ಡಿ ದೇವೇಗೌಡರು ಮನವಿ ಮಾಡಿದ್ದಾರೆ.

Key words:  Demand -not – close- Bhadravati- VISL-factory-HD Deve Gowda.