ನಿಖಿಲ್ ಓರ್ವ ಅಪ್ರಬುದ್ಧ ರಾಜಕಾರಣಿ: ಜೆಡಿಎಸ್ ನವರು ಮಾತಿನ ಮೇಲೆ ನಿಲ್ಲುವವರಲ್ಲ-ಸಂಸದೆ ಸುಮಲತಾ ಅಂಬರೀಶ್ ಟೀಕೆ.

ಮಂಡ್ಯ,ಜನವರಿ,23,2023(www.justkannada.in): ಮಂಡ್ಯದಲ್ಲಿ ಸ್ಪರ್ಧಿಸುತ್ತಾರೋ ಬೆಂಗಳೂರಿನಲ್ಲಿ ಸ್ಪರ್ಧಿಸುತ್ತಾರೂ ಎಂದು ತಮ್ಮನ್ನ ಟೀಕಿಸಿದ್ದ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ನಿಖಿಲ್ ಕುಮಾರಸ್ವಾಮಿ ಓರ್ವ ಅಪ್ರಬುದ್ಧ ರಾಜಕಾರಣಿ.  ಮೊನ್ನೆಯಷ್ಟೆ ಮಂಡ್ಯದಲ್ಲಿ ಚುನಾವಣೆ ನಿಲ್ಲುತ್ತೇನೆ ಎಂದಿದ್ದರು. ಈಗ ರಾಮನಗರದಲ್ಲಿ ನಿಲ್ಲುತ್ತಿರುವವರು ಯಾರು…? ಎಂದು ಪ್ರಶ್ನಿಸಿದರು.

ಜೆಡಿಎಸ್ ನಾಯಕರು ಯಾವಾಗಲೂ ಮಾತಿನ ಮೇಲೆ ನಿಲ್ಲುವವರಲ್ಲ. ಜೆಡಿಎಸ್ ನವರು ಪದೇ ಪದೇ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ . ಬೆಂಗಳೂರಿನಲ್ಲಿ  ಸ್ಪರ್ಧಿಸಿ ಅಂತಾ ಆಫರ್ ನೀಡಿದ್ದಾಗಲೇ ತಿರಸ್ಕರಿಸಿದ್ದೆ. ಯಾರ ಬೆಂಬಲವೂ ಇಲ್ಲದಿದ್ದಾಗ ಮಂಡ್ಯದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದೆ ಎಂದು ಸುಮಲತಾ ಅಂಬರೀಶ್ ಹೇಳಿದರು.

Key words: Mandya-MP-Sumalatha Ambarish-Nikil Kumaraswamy