ದೆಹಲಿ ಹಿಂಸಾಚಾರದ ಹಿಂದೆ ಮೋದಿ ಹಿಂಬಾಲಕರ ಕೈವಾಡ- ಮೈಸೂರಿನಲ್ಲಿ ಪ್ರಗತಿಪರ ಚಿಂತಕರಿಂದ ಗಂಭೀರ ಆರೋಪ…

ಮೈಸೂರು,ಜನವರಿ,27,2021(www.justkannada.in):  ಕೇಂದ್ರ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಹಿಂದೆ ಮೋದಿ ಹಿಂಬಾಲಕರ ಕೈವಾಡವಿದೆ ಎಂದು ಮೈಸೂರಿನಲ್ಲಿ ಪ್ರಗತಿಪರ ಚಿಂತಕರು ಗಂಭೀರ ಆರೋಪ ಮಾಡಿದ್ದು ಈ ಮೂಲಕ ರೈತರ ಬೆಂಬಲಕ್ಕೆ ನಿಂತಿದ್ದಾರೆ.jk

ನಿನ್ನೆ ದೆಹಲಿಯಲ್ಲಿ ನಡೆದ ಘಟನೆ ಕುರಿತು  ಮೈಸೂರಿನಲ್ಲಿಂದು  ಪ್ರಗತಿಪರ ಚಿಂತಕರಾದ ಪ್ರೊ. ಮಹೇಶ್‌ಚಂದ್ರ ಗುರು, ಅರವಿಂದ್ ಮಾಲಗತ್ತಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು, ರೈತರ ಪ್ರತಿಭಟನೆಯನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಮೋದಿ ಸಾಮಿಪ್ಯದಲ್ಲಿರುವ ವ್ಯಕ್ತಿಗಳೇ ಧ್ವಜ ಹಾರಿಸಿದ್ದಾರೆ. ರೈತರಿಂದ ಹಿಂಸಾಚಾರ ನಡೆದಿಲ್ಲ. ಮೋದಿ ಸಾಮಿಪ್ಯದಲ್ಲಿರುವವರೇ ಹಿಂಸಾತ್ಮಕ ಕೃತ್ಯ ನಡೆಸಿದ್ಧಾರೆ ಎಂದು ಆರೋಪಿಸಿದ್ದಾರೆ.

ಕೆಂಪು ಕೋಟೆಗೆ ನುಗ್ಗುವವರೆಗೂ ಸರ್ಕಾರ ಏನ್ ಮಾಡ್ತಿತ್ತು.  ಸರ್ಕಾರದ ವೈಫಲ್ಯವೇ ವಿನಃ ರೈತರ ದಾಳಿ ಅಲ್ಲ. ಎರಡು ತಿಂಗಳ ಕಾಲ ಶಾಂತಿಯುತ ಪ್ರತಿಭಟನೆ ರೈತರು ಹಿಂಸಾಚಾರ ನಡೆಸಲು ಸಾಧ್ಯವೇ. ಇನ್ನಾದರೂ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನ ವಾಪಾಸ್ ಪಡೆಯಲಿ ಎಂದು ಕೇಂದ್ರದ ವಿರುದ್ದ ಪ್ರೊ. ಮಹೇಶ್‌ಚಂದ್ರ ಗುರು, ಅರವಿಂದ್ ಮಾಲಗತ್ತಿ ವಾಗ್ದಾಳಿ ನಡೆಸಿದರು.Delhi farmer-protest- violence-PM- Modi -  Pro. Mahesh Chandra Guru - accused.

ರೈತರ ಹೋರಾಟ ಪ್ರಜಾಸತ್ತಾತ್ಮಕ ಆಗಿದ್ದು, ರಾಜಕೀಯ ಪ್ರೇರಿತವಾಗಿಲ್ಲ.

1947 ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆಯಿತು. 2021 ರಲ್ಲಿ ಸಂವಿಧಾನ ಉಳಿಸಿ, ಭಾರತ್  ಚಳವಳಿಯನ್ನು ರೈತರು ಮಾಡುತ್ತಿದ್ದಾರೆ. ರೈತರು ನಡೆಸುತ್ತಿರುವ ಹೋರಾಟ ಪ್ರಜಾಸತ್ತಾತ್ಮಕ ಆಗಿದ್ದು, ರಾಜಕೀಯ ಪ್ರೇರಿತವಾಗಿಲ್ಲ. ರೈತರ ಹೋರಾಟದ ಆಶಯವನ್ನು ನಿಷ್ಕ್ರಿಯಗೊಳಿಸಲು ಕೆಲ ನುಸುಳುಕೋರರು, ಸ್ಥಾಪಿತ ಹಿತಾಸಕ್ತಿಗಳು ಅಹಿತಕರ ಘಟನೆಗೆ ಕಾರಣವಾಗಿವೆ‌. ಇಂಡಿಯಾದ ವಿರೋಧಿಗಳು, ಸಂವಿಧಾನ, ರೈತ ವಿರೋಧಿಗಳು, ಪಟ್ಟಭದ್ರರು ನಿನ್ನೆ ಕೆಂಪುಕೋಟೆ ಮೇಲೇರಿ ಅವರ ಬಾವುಟವನ್ನು ಹಾರಿಸಿದ್ದಾರೆ ಎಂದು ಪ್ರೊ. ಮಹೇಶ್ ಚಂದ್ರಗುರು ಆರೋಪಿಸಿದರು.

Key words: Delhi farmer-protest- violence-PM- Modi –  Pro. Mahesh Chandra Guru – accused.