ಕ್ರಿಸ್ಟಲ್ ಪ್ರಶಸ್ತಿ ಸ್ವೀಕರಿಸಿದ ದೀಪಿಕಾ !

Promotion

ಬೆಂಗಳೂರು, ಜನವರಿ 22, 2019 (www.justkannada.in): ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ದಾವೋಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಆರ್ಥಿಕ ವೇದಿಕೆಯ ಕ್ರಿಸ್ಟಲ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

34 ವರ್ಷದ ದೀಪಿಕಾ ಅವರಿಗೆ ವಿಶ್ವ ಆರ್ಥಿಕ ವೇದಿಕೆಯ ವಿಶ್ವ ಕಲಾ ವೇದಿಕೆ ಅಧ್ಯಕ್ಷೆ ಮತ್ತು ಸಹ-ಸಂಸ್ಥಾಪಕಿ ಹಿಲ್ಡೆ ಶ್ವಾಬ್ ಅವರು ಪ್ರದಾನ ಮಾಡಿದ್ದಾರೆ.