ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಇಳಿಕೆ.

Promotion

ಬೆಂಗಳೂರು,ಜೂನ್,3,2021(www.justkannada.in): ರಾಜ್ಯದಲ್ಲಿ ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡಿದ್ದು, ನಗರ ಪ್ರದೇಶವಲ್ಲದೆ ಗ್ರಾಮೀಣ ಭಾಗದಲ್ಲೂ ಈ ಬಾರಿ ಕೊರೋನಾ ವ್ಯಾಪಿಸಿದೆ. ಈ ಮಧ್ಯೆ ಬೆಂಗಳೂರಿನಲ್ಲಿ  ಕೋವಿಡ್ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗಿದೆ.jk

ಹೌದು ಕಳೆದ ವಾರ 15.70 ರಷ್ಟು ಇದ್ದ ಕೋವಿಡ್ ಪಾಸಿಟಿವಿಟಿ ದರ ಈಗ 8.86ರಷ್ಟಕ್ಕೆ ಇಳಿಕೆಯಾಗಿದೆ. ಮೇ 19ರಿಂದ 25ರಲ್ಲಿ ಪಾಸಿಟಿವಿಟಿ ದರ 15.70 ರಷ್ಟು ಇತ್ತು. ಇದೀಗ ಮೇ 26ರಿಂದ ಜೂನ್ 2ರವರೆಗೆ 8.86ಕ್ಕೆ ಇಳಿದಿದೆ. ಕೋವಿಡ್ ಪಾಸಿಟಿವಿಟಿ ದರದಲ್ಲಿ ಇಳಿಕೆಯಾದರೂ ಸಹ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಈ ವಾರ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ವಾರ ಸಾವಿನ ಪ್ರಮಾಣ 3.60ರಷ್ಟಿತ್ತು. ಈ ವಾರ  5.13ಕ್ಕೆ ಏರಿಕೆಯಾಗಿದೆ.

Key words: Decrease- covid Positivity – Bangalore