ಕಾಂಗ್ರೆಸ್ ಗದ್ಧಲದ ನಡುವೆ ಸಂವಿಧಾನ ಕುರಿತು ಚರ್ಚೆ: ಧರಣಿನಿರತ ಕೈ ಶಾಸಕರ ವಿರುದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿ

Promotion

ಬೆಂಗಳೂರು,ಮಾ,3,2020(www.justkannada.in):  ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆ ವಿಧಾನಸಭಾ ಕಲಾಪದಲ್ಲಿ  ಇಂದು ಸಂವಿಧಾನ ಕುರಿತು ವಿಶೇಷ ಚರ್ಚೆ ನಡೆಲಾಯಿತು.

ವಿಧಾನಸಭೆ ಕಲಾಪದಲ್ಲಿ ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಸಂವಿಧಾನ ಕುರಿತ ಚರ್ಚೆಯ ಪ್ರಾಸ್ತಾವಿಕ ಭಾಷಣ ಮಾಡುತ್ತಿದ್ದ ವೇಳೆ, ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ವಿಪಕ್ಷ ಸದಸ್ಯರ ಗದ್ದಲದ ನಡುವೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಿಧಾನ ಕುರಿತ ಚರ್ಚೆಯ ಪ್ರಾಸ್ತವಿಕ ಭಾಷಣ ಮುಗಿಸಿದರು.

ಭಾಷಣ ಬಳಿಕ ಧರಣಿ ನಿರತ ಕಾಂಗ್ರೆಸ್ ಸದಸ್ಯರ ವಿರುದ್ದ ಹರಿಹಾಯ್ದ  ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮ್ಮ ನಡೆ ಸಂವಿಧಾನಕ್ಕೆ ಸದನಕ್ಕೆ ಅಪಚಾರ ತಂದಿದೆ. ಇದನ್ನ ಖಂಡಿಸುತ್ತೇನೆ ಎಂದು ಕಿಡಿಕಾರಿದರು. ಬಳಿಕ ವಿಧಾನಸಭಾ ಕಲಾಪವನ್ನ ನಾಳೆಗೆ ಮುಂದೂಡಲಾಯಿತು.

Key words: Debate –Constitution-Speaker- Vishweshwara hedge kageri- congress- member