ಉಗ್ರ ಚಟುವಟಿಕೆಯಲ್ಲಿ ತೊಡಗುವವರಿಗೆ ಗಲ್ಲುಶಿಕ್ಷೆ ಅಥವಾ ಎನ್ ಕೌಂಟರ್ ರೀತಿಯ ಶಿಕ್ಷೆ ಕಾನೂನೂ  ಜಾರಿಯಾಗಲಿ –ಕೆ.ಎಸ್ ಈಶ್ವರಪ್ಪ.

Promotion

ಶಿವಮೊಗ್ಗ,ನವೆಂಬರ್,21,2022(www.justkannada.in):  ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಉಗ್ರ ಚಟುವಟಿಕೆಯಲ್ಲಿ ತೊಡಗುವವರಿಗೆ ಗಲ್ಲುಶಿಕ್ಷೆ ಅಥವಾ ಎನ್ ಕೌಂಟರ್ ರೀತಿಯ ಶಿಕ್ಷೆ ಕಾನೂನೂ  ಜಾರಿಯಾಗಲಿ ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಜನರನ್ನು ಹೆದರಿಸುವ ಪ್ರಯತ್ನ ನಡೆಯುತ್ತಿದೆ.  ಉಗ್ರ ಶಾರಿಕ್ ಸೇರಿ ನಾಲ್ವರನ್ನ ಬಂಧಿಸಲಾಗಿದೆ.  ಜನರಾಗಲಿ ಬಿಜೆಪಿಯಾಗಲಿ ಬೆದರಿಕೆಗೆ ಬಗ್ಗಲ್ಲ ಮುಸ್ಲಿಂ ಹಿರಿಯರು ಮಕ್ಕಳಿಗೆ ಬುದ್ದಿ ಹೇಳಬೇಕು ಎಂದರು.

ರಾಜ್ಯ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ ಕೇಂದ್ರ ಗೃಹಸಚಿವರಿಗೆ  ಮಾಹಿತಿ ನೀಡಲಾಗಿದೆ. ಇಂತಹ ಗೂಂಡಾಗಳನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಉಗ್ರ ಚಟುವಟಿಕೆಯಲ್ಲಿ ತೊಡಗುವವರಗೆ ಗಲ್ಲುಶಿಕ್ಷೆ ಅಥವಾ ಎನ್ ಕೌಂಟರ್ ರೀತಿಯ ಶಿಕ್ಷೆ ಜಾರಿಯಾಗಲಿ ಎಂದರು.

Key words:  death penalty -encounter -law – implement – violent -activities-KS Eshwarappa.