ಹತ್ಯೆಯಾಗಿದ್ದ ಹಿರೇಕೋಡಿಯ ಜೈನಮುನಿಯ ಮೃತದೇಹ ಪತ್ತೆ..

Promotion

ಬೆಳಗಾವಿ,ಜುಲೈ,8,2023(www.justkannada.in):  ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ  ಕಾಮಕುಮಾರ ನಂದಿ ಮಹಾರಾಜರನ್ನ ದುಷ್ಕರ್ಮಿಗಳೂ ಕೊಲೆ ಮಾಡಿದ್ದು ಇದೀಗ ಅವರ ಮೃತದೇಹ ಕೊಳವೆ ಬಾವಿಯಲ್ಲಿ ಪತ್ತೆಯಾಗಿದೆ.

ರಾಯಭಾಗ ತಾಲ್ಲೂಕಿನ ಕಟಕಭಾವಿ ಬಳಿ ಕೊಳೆವೆಬಾವಿಯಲ್ಲಿ  ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಹತ್ಯೆ ಪ್ರಕರಣಕ್ಕೆ  ಆರೋಪಿಗಳನ್ನ ಬಂಧಿಸಲಾಗಿದ್ದು ಈ ಸಂಬಂಧ ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಆಶ್ರಮದಲ್ಲೇ ಜೈನಮುನಿಯವರನ್ನ ಕೊಲೆ ಮಾಡಿ, ಸಂಬಂಧಿಕರ ಗದ್ದೆಯಲ್ಲಿ ಶವ ಎಸೆದಿರುವುದಾಗಿ ಬಂಧಿತ ಆರೋಪಿಗಳು ಹೇಳಿದ್ದಾರೆ. ಇನ್ನೂ ಶ್ರೀಗಳಿಗೆ ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ದಾರೆ’ ಎಂದು ಶ್ರೀಗಳ ಪೂರ್ವಾಶ್ರಮದ ಸಂಬಂಧಿ ಪ್ರದೀಪ್ ಎನ್ನುವವರು ಹೇಳಿದ್ದಾರೆ.

ಮೂಲತಃ ಖಟಕಬಾವಿ ಗ್ರಾಮದವನೇ ಆಗಿದ್ದ ಪ್ರಮುಖ ಆರೋಪಿ, ಜೈನಮುನಿ ಜೊತೆ ಉತ್ತಮ ಒಡನಾಟ ಹೊಂದಿದ್ದು, ಜೈನಮುನಿಗಳ ವಿಶ್ವಾಸಗಳಿಸಿ ಹಿರೇಕೋಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ. ಬಳಿಕ ಇದನ್ನೇ ಲಾಭ ಮಾಡಿಕೊಂಡು ಅವರ ಬಳಿ ಲಕ್ಷಾಂತರ ರೂಪಾಯಿ ಹಣವನ್ನ ಪಡೆದಿದ್ದಾನೆ. ಇದೇ ಹಣವನ್ನ ವಾಪಸ್ ಕೇಳಿದ್ದಕ್ಕೆ ಇದೀಗ ಜೈನಮುನಿಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

Key words: dead body –belagavi- Hirekodi- Jainmuni – killed