ಬಿಜೆಪಿ ಸರ್ಕಾರದ ಯೋಜನೆ ಕೈಬಿಟ್ಟಿದ್ದು ಜನರಿಗೆ ಮಾಡಿದ ಮೋಸ- ಮಾಜಿ ಸಚಿವ ಮುರುಗೇಶ್ ನಿರಾಣಿ.

ಬೆಳಗಾವಿ,ಜುಲೈ,8,2023(www.justkannada.in):  ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಬಿಜೆಪಿ ಸರ್ಕಾರದ 20ಕ್ಕೂ ಹೆಚ್ಚು ಯೋಜನೆ ಕೈಬಿಟ್ಟಿದ್ದಾರೆ. ಬಿಜೆಪಿ ಸರ್ಕಾರದ ಯೋಜನೆ ಕೈಬಿಟ್ಟಿದ್ದು ಜನರಿಗೆ ಮಾಡಿದ ಮೋಸ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ಸಿಎಂ ಸಿದ್ದರಾಮಯ್ಯ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸಹ ಸುಳ್ಳು ಭರವಸೆ ನೀಡಿದ್ದಾರೆ. ಘೋಷಣೆ ವೇಳೆ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಹಾಕಿರಲಿಲ್ಲ. ಈಗ ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಿದ್ದಾರೆ. ಇದು ಒಂದು ಸಮುದಾಯದ ಓಲೈಕೆಯ ಬಜೆಟ್ ಎಂದು ಟೀಕಿಸಿದರು.

Key words: Abandoning- BJP government -plan –siddaramaiah-budget-Former minister-Murugesh Nirani.