‘ಮೌನಂ’ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಡಿ ಬಾಸ್ !

Promotion

ಬೆಂಗಳೂರು, ಫೆಬ್ರವರಿ 04, 2020 (www.justkannada.in): ‘ಮೌನಂ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿಕೊಡುವ ಮೂಲಕ ರಿಲೀಸ್ ಹಂತದಲ್ಲಿರುವ ಚಿತ್ರಕ್ಕೆ ಸಾಥ್ ನೀಡಿದ್ದಾರೆ ಚಾಲೆಂಜಿಂಗ್ ಸ್ಟಾರ್.

ರಾಜ್ ಪಂಡಿತ್ ನಿರ್ದೇಶನದ ‘ಮೌನಂ’ ಚಿತ್ರ ಸೈಕಲಾಜಿಕಲ್ ಸಬ್ಜೆಕ್ಟ್ ಒಳಗೊಂಡಿದ್ದು, ವಿಭಿನ್ನ ಪ್ರಯೋಗವನ್ನು ಚಿತ್ರತಂಡ ಮಾಡಿದೆ. ಚಿತ್ರದಬಗ್ಗೆ ಕೊಂಚವೂ ಸುಳಿವು ಬಿಟ್ಟುಕೊಡದ ಮೌನಂ ಚಿತ್ರತಂಡ ಟೀಸರ್ನಲ್ಲೂ ಆ ಕ್ಯೂರಿಯಾಸಿಟಿಯನ್ನು ಕಾಯ್ದುಕೊಂಡಿದೆ.

ಈಗ ಚಿತ್ರದ ಬಹು ನಿರೀಕ್ಷಿತ ಟ್ರೈಲರ್ ಯಾವ ರೀತಿ ಕುತೂಹಲ ಬಿಲ್ಡ್ ಮಾಡುತ್ತೆ ಅನ್ನೋದಕ್ಕೆ ನಾಳೆಉತ್ತರ ಸಿಗಲಿದೆ. ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ನಲ್ಲಿನಾಳೆ ಆರು ಗಂಟೆಗೆ ‘ಮೌನಂ’ ಚಿತ್ರದ ಟ್ರೈಲರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆ.