ಫಲಿತಾಂಶದ ಬಳಿಕ ಚುನಾವಣೆಗೆ ಹೋಗ್ತೇವೆ ಅನ್ನೋದು ಸುಳ್ಳು- ಸಿದ್ದರಾಮಯ್ಯ ಮತ್ತೆ ಸಿಎಂ ಹೇಳಿಕೆ ಕುರಿತು ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ…

Promotion

ಕಲ್ಬುರ್ಗಿ,ಮೇ,7,2019(www.justkannada.in): ಫಲಿತಾಂಶದ ಬಳಿಕ ನಾವು ಚುನಾವಣೆಗೆ ಹೋಗ್ತೇವೆ ಅನ್ನೋದು ಸುಳ್ಳು. ಕೆಲವರು ಈ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಕಲ್ಬುರ್ಗಿ ಜಿಲ್ಲೆ ಚಿಂಚೋಳೀಯ ಚಂದನಕೇರಾ ಗ್ರಾಮದಲ್ಲಿ ಇಂದು ಮಾತನಾಡಿದ ಡಿಸಿಎಂ ಪರಮೇಶ್ವರ್, ಫಲಿತಾಂಶದ ಬಳಿಕ ಚುನಾವಣೆಗೆ ಹೋಗುವ ಚಿಂತನೆ ಇಲ್ಲ. ಉಪಚುನಾವಣೆಯ ಗೆಲುವಿನ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.  ಫಲಿತಾಂಶ  ಬಳಿಕ ಚುನಾವಣೆ ಹೋಗೋದು ಶುದ್ಧಸುಳ್ಳು ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಪರಮೇಶ್ವರ್,  ಕೆಲವರು  ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಇದು ಅಪ್ರಸ್ತುತ. ಈ ಬಗ್ಗೆ  ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧರಿಸುತ್ತೆ.  ಆ ರೀತಿ ಹೇಳಿಕೆ ನೀಡದಂತೆ ವರಿಷ್ಠರು ಸೂಚಿಸುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.

Key words:  DCM –Parameshwar- reacted – Siddaramaiah-CM –again