ಸೋತ ಸವದಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ: ನಾನು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ- ಹೆಚ್.ವಿಶ್ವನಾಥ್…

Promotion

ಮೈಸೂರು,ಜ,30,2020(www.justkannada.in):  ಉಪಚುನಾವಣೆಯಲ್ಲಿ ಸೋತವರಿಗೆ ಮಂತ್ರಿಗಿರಿ ಇಲ್ಲ ಎಂದು ಬಿಜೆಪಿ ವಲಯಲ್ಲಿ ಮಾತು ಕೇಳಿ ಬಂದಿರುವ ಹಿನ್ನೆಲೆ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಹೆಚ್.ವಿಶ್ವನಾಥ್, ಸೋತ ಸವದಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಇನ್ನು ನಾವು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ನನ್ನ ಗುರಿ ಇದ್ದಿದ್ದು ಸಮ್ಮಿಶ್ರ ಸರ್ಕಾರ ಪತನ. ನಾನು ತಪ್ಪು ಮಾಡಿದ್ದೇನೆ ಅನ್ನಿಸಿಲ್ಲ. ಮಂತ್ರಿಗಿರಿ ಸಿಗಲಿ ಬಿಡಲಿ ನಾನು ನಾನೇ. ರಾಜಕೀಯ ಕೊನೆಗಾಲದಲ್ಲಿ ನನಗೆ ಖಂಡಿತ ಸೋಲಾಗಲ್ಲ. ಸಿಎಂ ಬಿಎಸ್ ಯಡಿಯೂರಪ್ಪರನ್ನ ನಂಬಿದ್ದೇನೆ. ಮಂತ್ರಿ ಸ್ಥಾನ ವಿಚಾರವನ್ನ ಬಿಎಸ್ ವೈ ಬಳಿ ಚರ್ಚಿಸಲ್ಲ ಎಂದು ಹೇಳಿದರು.

ಇದೇ ವೇಳೆ ಶಾಸಕ ಸುಧಾಕರ್ ವಿರುದ್ದ ಗರಂ ಆದ ಹೆಚ್.ವಿಶ್ವನಾಥ್, ಉಪಚುನಾವಣೆಗೆ ನಿಲ್ಲಬಾರದಿತ್ತು ಎಂದಿದ್ದಾರೆ. ಹಾಗೆ ಹೇಳಲು ಅವರೇನು ಚೀಫ್ ಮಿನಿಸ್ಟ್ರಾ..? ನಮ್ಮ ಗುಂಪಿನಲ್ಲಿ ಯಾರೂ ಈ ರೀತಿ ಹೇಳಿಲ್ಲ. ರಮೇಶ್ ಜಾರಕಿಹೊಳಿ ಸರಿಯಾಗಿ ಮಾತನಾಡಿದ್ದಾರೆ ಎಂದು ಶಾಸಕ ಸುಧಾಕರ್ ವಿರುದ್ದ ಕಿಡಿಕಾರಿದರು.

Key words:  DCM -given –lakshman savadi-ministerial –H.Vishwanath