ಜನಾಂಗೀಯ ನಿಂದನೆ: ಸೋಷಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾ ಕ್ಷಮೆ ಕೋರಿದ ಡೇವಿಡ್ ವಾರ್ನರ್

Promotion

ಸಿಡ್ನಿ, ಜನವರಿ 12, 2020 (www.justkannada.in): ಜನಾಂಗೀಯ ನಿಂದನೆ ಒಪ್ಪಲು ಸಾಧ್ಯವಿಲ್ಲ ಎಂದಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಟೀ ಇಂಡಿಯಾ ಹಾಗೂ ಸಿರಾಜ್ ಬಳಿ ಕ್ಷಮೆಯಾಚಿಸಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ವಾರ್ನರ್, ಜನಾಂಗೀ ನಿಂದನೆ ಒಪ್ಪುವಂತಹದಲ್ಲ. ಘಟನೆ ಬಗ್ಗೆ ಟೀ ಇಂಡಿಯಾ ಹಾಗೂ ಮೊಹಮ್ಮದ್ ಸಿರಾಜ್ ಬಳಿ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ.

5 ದಿನಗಳ ಕಠಿಣ ಆಟದಲ್ಲಿ ನಮ್ಮ ತಂಡ ಸಾಧ್ಯವಾದಷ್ಟು ಶ್ರಮಪಟ್ಟು ಆಗಿದ್ದರು. ಟೀ ಇಂಡಿಯಾ ಆಡಿದ ರೀತಿ ಪಂದ್ಯವನ್ನು ಡ್ರಾ ಮಾಡಿಕೊಂಡ ರೀತಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಜ.10 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಜನಾಂಗೀಯ ನಿಂದನೆ ನಡೆದಿತ್ತು.