ರಾಜ ವೀರಮದಕರಿ ನಾಯಕ ಚಿತ್ರೀಕರಣ ಶುರು

Promotion

ಬೆಂಗಳೂರು, ಸೆಪ್ಟೆಂಬರ್ 22, 2020 (www.justkannada.in): ಲಾಕ್ ಡೌನ್ ಬಳಿಕ ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜ ವೀರಮದಕರಿ ನಾಯಕ ಸಿನಿಮಾ ಶೂಟಿಂಗ್ ಪುನರಾರಂಭವಾಗಲಿದೆ.

ಶೂಟಿಂಗ್ ಲಾಕ್ ಡೌನ್ ಕಾರಣದಿಂದ ಸ್ಥಗಿತವಾಗಿದ್ದ ಚಿತ್ರೀಕರಣ ಅಕ್ಟೋಬರ್ ನಲ್ಲಿ ಕರ್ನಾಟಕದ ಹಲವೆಡೆ ಚಿತ್ರೀಕರಣವಾಗಲಿದೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ.

ಲಾಕ್ ಡೌನ್ ಗೂ ಮೊದಲು ಕೇರಳದಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣ ನಡೆದಿತ್ತು. ಇದೀಗ ಎಂಬ ಮಾಹಿತಿ ಬಂದಿದೆ. ಇದು ಲಾಕ್ ಡೌನ್ ಬಳಿಕ ದರ್ಶನ್ ಪಾಲ್ಗೊಳ್ಳುತ್ತಿರುವ ಮೊದಲ ಸಿನಿಮಾ ಶೂಟಿಂಗ್ ಆಗಲಿದೆ.